×
Ad

ದ.ಕ. ಜಿಲ್ಲಾ ಇಂಟಕ್ ಕಾರ್ಯಕಾರಿಣಿ ಸಭೆ

Update: 2020-09-06 17:42 IST

ಮಂಗಳೂರು, ಸೆ. 6: ದ.ಕ.ಜಿಲ್ಲಾ ಇಂಟಕ್ ಕಾರ್ಯಕಾರಣಿ ಸಭೆ ಮತ್ತು ಪದಾಧಿಕಾರಿಗಳ ಹಾಗೂ ಯುವ ಇಂಟಕ್ ಸಹಿತ ವಿವಿಧ ವಿಧಾನ ಸಭಾ ಕ್ಷೇತ್ರಗಳ ಇಂಟಕ್ ಸಮಿತಿಗಳ ಪುನರ್ರಚನೆ ಕಾರ್ಯಕ್ರಮವು ರವಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು.

ಮಾಜಿ ಶಾಸಕ ಜೆ.ಆರ್ ಲೋಬೋ ಮತ್ತು ಐವನ್ ಡಿಸೋಜ, ರಾಷ್ಟ್ರೀಯ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ ಸಭೆ ಉದ್ಘಾಟಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್‌ಗಳಾದ ಕವಿತಾ ಸನಿಲ್, ಮಹಾಬಲ ಮಾರ್ಲ, ಕಾಂಗ್ರೆಸ್ ಮುಖಂಡ ಕಳ್ಳಿಗೆ ತಾರಾನಾಥ ಶೆಟ್ಟಿ ಮಾತನಾಡಿದರು.

ದ.ಕ. ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ, ರಾಜ್ಯ ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಯುವ ಇಂಟಕ್ ಪದಾಧಿಕಾರಿಗಳ ಸಮಿತಿ ರಚನೆ ಮಾಡಿ ಅಧಿಕಾರ ಸ್ವೀಕಾರ ಪತ್ರ ವಿತರಿಸಲಾಯಿತು.
 ಇಂಟಕ್‌ನ ಮುಖಂಡರಾದ ರಹೀಂ ಸಿ.ಎ, ಸುರೇಶ್ ಕುಮಾರ್, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಶ್ರಫ್, ವಿವೇಕ್ ರಾಜ್, ವಿಜಯ್ ಸುವರ್ಣ,ವಿಲ್ಫ್ರೆಡ್ ಡಿಸೋಜ ಉಪಸ್ಥಿತರಿದ್ದರು.
ಬೊಂಡಾಲ ಚಿತ್ತರಂಜನ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News