ದೇರೆಬೈಲ್ : ಕಾಂಕ್ರೀಟ್ ರಸ್ತೆ ಉದ್ಘಾಟನೆ
Update: 2020-09-06 17:46 IST
ಮಂಗಳೂರು, ಸೆ. 6: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇರೆಬೈಲ್ 23ನೇ ವಾರ್ಡಿನಲ್ಲಿ ಮಳೆಹಾನಿ ಕಾಮಗಾರಿಯಡಿ 5 ಲಕ್ಷ ರೂ. ವೆಚ್ಚದಲ್ಲಿ ಮಜಲು ಮುಖ್ಯರಸ್ತೆ, 7 ಲಕ್ಷ ರೂ. ವೆಚ್ಚದಲ್ಲಿ ನಾಗಕನ್ನಿಕ ಮುಖ್ಯರಸ್ತೆ ಹಾಗೂ ರವಿಶಂಕರ ಗುರೂಜಿ ಶಾಲಾರಸ್ತೆ, 9 ಲಕ್ಷ ರೂ. ವೆಚ್ಚದಲ್ಲಿ ಲ್ಯಾಂಡ್ ಲಿಂಕ್ ಅಡ್ಡರಸ್ತೆ ಕಾಂಕ್ರಿಟಿಕರಣಗೊಳಿಸಲಾಗಿದೆ. ಶಾಸಕ ಡಾ.ವೈ. ಭರತ್ ಶೆಟ್ಟಿ ಈ ರಸ್ತೆಯನ್ನು ರವಿವಾರ ಉದ್ಘಾಟಿಸಿದರು.
ಈ ಸಂದರ್ಭ ಮನಪಾ ಸದಸ್ಯೆ ರಂಜಿನಿ ಕೋಟ್ಯಾನ್, ಶಕ್ತಿಕೇಂದ್ರದ ಪ್ರಮುಖರಾದ ರಾಘವೇಂದ್ರ ಉಡುಪ, ದಿನೇಶ್ ಪೂಜಾರಿ, ಯುವ ಮೋರ್ಚಾ ಉಪಾಧ್ಯಕ್ಷ ಜಿತೇಶ್, ಲ್ಯಾಂಡ್ ಲಿಂಕ್ಸ್‌ನ ಪ್ರಮುಖರಾದ ನಾರಾಯಣ ಕಂಜರ್ಪಣೆ, ನಂದಕಿಶೋರ್ ಭಟ್, ಗಣೇಶ್ ಕುಮಾರ್ ಎಂ.ಎಲ್., ನವೀನ್ ಸುವರ್ಣ, ಕಿರಣ್ ರಾಜ್ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.