ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲ, ಭಾರತದ ಬಡವರ ಮೇಲಿನ ದಾಳಿ: ರಾಹುಲ್ ಗಾಂಧಿ

Update: 2020-09-06 13:39 GMT

ಹೊಸದಿಲ್ಲಿ,ಸೆ.6: ದೋಷಪೂರಿತ ಸರಕುಗಳ ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯು ಭಾರತದ ಅಸಂಘಟಿತ ವಲಯದ ಆರ್ಥಿಕತೆಯ ಮೇಲೆ ನೋಟು ನಿಷೇಧದ ನಂತರದ ಎರಡನೇ ಪ್ರಮುಖ ದಾಳಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರವಿವಾರ ಹೇಳಿದ್ದಾರೆ.

ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲ, ಅದು ದೇಶದ ಬಡವರ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿರುವ ಅವರು, ಅದರ ವಿರುದ್ಧ ಒಂದಾಗುವಂತೆ ಜನತೆಗೆ ಕರೆ ನೀಡಿದ್ದಾರೆ.

 ಜಿಎಸ್‌ಟಿ ಯುಪಿಎ ಪರಿಕಲ್ಪನೆಯಾಗಿತ್ತು ಮತ್ತು ಅದು ಒಂದು ತೆರಿಗೆ,ಕನಿಷ್ಠ ತೆರಿಗೆ ಮತ್ತು ಸರಳ ತೆರಿಗೆಯಾಗಿತ್ತು. ಎನ್‌ಡಿಎದ ಜಿಎಸ್‌ಟಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಶೇ.28ರವರೆಗೆ ನಾಲ್ಕು ತೆರಿಗೆ ಸ್ತರಗಳನ್ನು ಹೊಂದಿದೆ, ಇದು ಜಟಿಲವಾಗಿದೆ ಮತ್ತು ಸುಲಭದಲ್ಲಿ ಅರ್ಥವಾಗುವುದಿಲ್ಲ ಎಂದು ಆರ್ಥಿಕತೆ ಕುರಿತು ತನ್ನ ವೀಡಿಯೊ ಸರಣಿಯ ಮೂರನೇ ಭಾಗದಲ್ಲಿ ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News