ಭೀಮಾ ಕೊರೆಗಾಂವ್ ಪ್ರಕರಣದೊಂದಿಗೆ ಸಂಬಂಧವಿಲ್ಲದಿದ್ದರೂ ಸಮನ್ಸ್ ನೀಡಿ ಕಿರುಕುಳ: ಪ್ರೊಫೆಸರ್ ಪಾರ್ಥೊಸಾರಥಿ

Update: 2020-09-06 13:52 GMT

ಕೋಲ್ಕತಾ, ಸೆ.6: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಪ್ರಶ್ನೆಗೆ ಉತ್ತರಿಸಲು ಹಾಜರಾಗಬೇಕೆಂದು ಎನ್‌ಐಎಯಿಂದ ಸಮನ್ಸ್ ಪಡೆದಿರುವ ಕೋಲ್ಕತಾದ ಪ್ರೊಫೆಸರ್ ಪಾರ್ಥೊಸಾರಥಿ, ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪುಣೆಯ ಭೀಮಾ ಕೊರೆಗಾಂವ್ ಸ್ಮಾರಕಕ್ಕೆ ತಾನು ಇದುವರೆಗೆ ಭೇಟಿ ನೀಡಿಲ್ಲ. ತನ್ನ ವಿರುದ್ಧ ಯಾವುದೇ ಪ್ರಕರಣವೂ ದಾಖಲಾಗಿಲ್ಲ. ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ) ಇತರ ಬುದ್ಧಿಜೀವಿಗಳ ವಿಷಯದಲ್ಲಿ ನಡೆದುಕೊಂಡಂತೆ ತನಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ ಎಂದು ಐಐಎಸ್‌ಇಆರ್‌ನ ಪ್ರೊಫೆಸರ್ ಪಾರ್ಥೊಸಾರಥಿ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣದಲ್ಲಿ ತನ್ನನ್ನು ಸಾಕ್ಷಿ ಎಂದು ತನಗೆ ಸಮನ್ಸ್ ನೀಡಲಾಗಿದೆ. ದೇಶದಾದ್ಯಂತ ಬುದ್ಧಿಜೀವಿಗಳು ಹಾಗೂ ಶಿಕ್ಷಣ ತಜ್ಞರ ಜತೆ ನಡೆದುಕೊಂಡಂತೆಯೇ, ತನಗೆ ಕಿರುಕುಳ ನೀಡಿ ಭೀತಿ ಹುಟ್ಟಿಸುವ ಏಕೈಕ ಉದ್ದೇಶ ಇದರಲ್ಲಿದೆ. ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಯಾಗಿದ್ದು, ತೊಂದರೆಗೆ ಒಳಗಾದವರ ಪರ ವಹಿಸುತ್ತೇನೆ. ಕೊರೋನ ವಿರುದ್ಧದ ನಿರ್ಣಾಯಕ ಹೋರಾಟದ ಇಂತಹ ಸಂದರ್ಭದಲ್ಲಿ ತನಗೆ ಕಿರುಕುಳ ನೀಡುವ ಇಂತಹ ಕ್ರಮ ದುರದೃಷ್ಟಕರ ಎಂದು ಪಾರ್ಥೊಸಾರಥಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News