×
Ad

​ಸೆ.7ರಿಂದ ಕೊಲ್ಲೂರು ದೇವಸ್ಥಾನದಲ್ಲಿ ಎಲ್ಲಾ ಸೇವೆ ಪ್ರಾರಂಭ

Update: 2020-09-06 19:43 IST

ಉಡುಪಿ, ಸೆ.6: ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯದಲ್ಲಿ ಸೋಮವಾರದಿಂದ (ಸೆ.7) ಎಲ್ಲಾ ಸೇವೆಗಳು ಪ್ರಾರಂಭ ಗೊಳ್ಳುತ್ತವೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ.ಸುತಗುಂಡಿ ತಿಳಿಸಿದ್ದಾರೆ.

ಧಾರ್ಮಿಕ ದತ್ತಿ ಆಯುಕ್ತರು ದೇವಸ್ಥಾನದ ಎಲ್ಲಾ ಸೇವೆ ಆರಂಭಕ್ಕೆ ಸೆ.1ರಂದು ಅನುಮತಿ ನೀಡಿದ್ದು, ನಾಳೆಯಿಂದ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಸೇವೆಗಳು ಲಭ್ಯವಾಗಲಿವೆ. ಭಕ್ತರಿಗೆ ಒಳಗೆ ಪ್ರವೇಶಿಸುವಾಗ ಸ್ಯಾನಟೈಸರ್‌ನ ಬಳಕೆ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

ಸುರಕ್ಷಿತ ಅಂತರ ಕಾಪಾಡಿಕೊಂಡು ಚಂಡಿಕಾ ಹೋಮಕ್ಕೆ ಅವಕಾಶ ನೀಡಲಾಗಿದೆ. ನಿಯಮಿತ ಭಕ್ತರು ಮಾತ್ರ ಯಾಗಶಾಲೆ ಯನ್ನು ಪ್ರವೇಶಿಸಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಕುಂಕುಮಾರ್ಚನೆ, ಲಾಡು ಪ್ರಸಾದ, ತುಲಾಭಾರ ಸೇವೆಯ ಜೊತೆಗೆ ಬೆಳ್ಳಿ, ಚಿನ್ನದ ರಥೋತ್ಸವ ಸೇವೆಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ನಿಗದಿತ ಸಂಖ್ಯೆಯ ಭಕ್ತರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ದೇವಸ್ಥಾನದಲ್ಲಿ ಮಧ್ಯಾಹ್ನದ ಊಟಕ್ಕೆ ಮಾತ್ರ ಅವಕಾಶವಿದ್ದು, ಸದ್ಯ ರಾತ್ರಿ ಊಟ ಇರುವುದಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News