ಪಿಯುಸಿ ಪೂರಕ ಪರೀಕ್ಷೆ: ಸೋಂಕಿತ ವಿದ್ಯಾರ್ಥಿಗಳಿದ್ದರೆ ಮಾಹಿತಿ ನೀಡಲು ಸೂಚನೆ
Update: 2020-09-06 20:01 IST
ಉಡುಪಿ, ಸೆ.6: ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದರೆ ಕಾಲೇಜಿನ ಪ್ರಾಂಶು ಪಾಲರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಅಥವಾ ಉಪನಿರ್ದೇಶಕರ ಕಚೇರಿ (ದೂ.ಸಂ.:0820-2575891)ಗೆ ಮುಂಚಿತವಾಗಿ ಮಾಹಿತಿಯನ್ನು ನೀಡಿದರೆ ಪ್ರತ್ಯೇಕವಾದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗು ವುದು ಎಂದು ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ಆದುದರಿಂದ ಪರೀಕ್ಷೆ ಬರೆಯುವ ಸೋಂಕಿತ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಬೇಕು. ಸೋಂಕಿತ ವಿದ್ಯಾರ್ಥಿಗಳನ್ನು ಆಂಬ್ಯುಲೆನ್ಸ್ ಮೂಲಕ ನಿಗದಿತ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.