ನರೇಗಾ ಯೋಜನೆ ಗ್ರಾಪಂಗಳಲ್ಲಿ ಸಮರ್ಪಕ ಜಾರಿಗೆ ಆಗ್ರಹ

Update: 2020-09-06 14:41 GMT

ಬೈಂದೂರು, ಸೆ.6: ಬೈಂದೂರು ಪಟ್ಟಣ ಪಂಚಾಯತ್ ಒಳಗೊಂಡಂತೆ ತಾಲೂಕಿನಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಗ್ರಾಪಂಗಳಲ್ಲಿ ಸಮರ್ಪಕವಾಗಿ ಜಾರಿ ಮಾಡ ಬೇಕೆಂದು ಬೈಂದೂರು ತಾಲೂಕು ಸಿಐಟಿಯು ಸಂಚಾಲಕ ಉದಯ ಗಾಣಿಗ ಮೊಗೇರಿ ಆಗ್ರಹಿಸಿದ್ದಾರೆ.

ಮಟ್ನಕಟ್ಟೆ ಮಹಾಗಣಪತಿ ದೆವಸ್ಥಾನ ವಠಾರದಲ್ಲಿ ಸೆ.6ರಂದು ನಡೆದ ಕೆರ್ಗಾಲ್ ಗ್ರಾಪಂ ವ್ಯಾಪ್ತಿಯ ಕೃಷಿಕೂಲಿಕಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿದರು. ಚೆರುಮಕ್ಕಿ ಕಾಯಕ ಸಂಘ ಕೆರ್ಗಾಲ್ ಗ್ರಾಮದಲ್ಲಿ 6ನೇ ಗುಂಪು ರಚಿಸಲಾಯಿತು. ಕಾಯಕ ಬಂಧುವಾಗಿ ನಾಗರಾಜ ದೇವಾಡಿಗ ಚೆರುಮಕ್ಕಿ ಸರ್ವಾನುಮತದಿಂದ ಆಯ್ಕೆಯಾದರು. ನರೇಗಾ ಕೆಲಸಗಾರ್ತಿ ಸುಷ್ಮಾ ಅಧ್ಯಕ್ಷತೆ ವಹಿಸಿದ್ದರು. ಸೆ.10ರಂದು ಅರ್ಜಿ ನಮೂನೆ 6 ರಲ್ಲಿ ಕೆಲಸದ ಬೇಡಿಕೆ ಪಟ್ಟಿ ಗ್ರಾಪಂಗೆ ಸಾಮೂಹಿವಾಗಿ ಸಲ್ಲಿಸಲು ನಿರ್ಣಯಿ ಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News