ಮೃತದೇಹ ಪತ್ತೆ
Update: 2020-09-06 21:21 IST
ಕೋಟ, ಸೆ.6: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಮ್ರಗೋಡು ಗ್ರಾಮದ ಪಡುಬೆಟ್ಟು ನಿವಾಸಿ ಭಾಸ್ಕರ ಬಿ.ಪೂಜಾರಿ(49) ಎಂಬವರ ಮೃತ ದೇಹವು ಬಾಳ್ಕುದ್ರು ಗ್ರಾಮದ ಬಟ್ಟನ ಕುದ್ರು ಸೇತುವೆಯ ಹತ್ತಿರದ ಹೊಳೆ ಯಲ್ಲಿ ಪತ್ತೆಯಾಗಿದೆ.
ಸೆ.3ರಂದು ಸಂಜೆ ಮನೆಯಿಂದ ಹೊರಗೆ ಹೋದ ಇವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಸೆ.5ರಂದು ಮಧ್ಯಾಹ್ನ ವೇಳೆ ಇವರ ಮೃತದೇಹವು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬಟ್ಟನಕುದ್ರು ಹೊಳೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.