ಎಸ್ ಡಿ ಪಿ ಐ ಹಳೆಯಂಗಡಿ ವತಿಯಿಂದ ಉಚಿತ ಆಯುಷ್ಮನ್ ಕಾರ್ಡ್ ನೋಂದಣಿ ಅಭಿಯಾನ

Update: 2020-09-06 16:36 GMT

ಹಳೆಯಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಳೆಯಂಗಡಿ ವಲಯದ ವತಿಯಿಂದ 'ಉಚಿತ ಆಯುಷ್ಮನ್ ಕಾರ್ಡ್ ನೋಂದಣಿ ಅಭಿಯಾನ'ವು ಹಳೆಯಂಗಡಿ ಇಂದಿರಾ ನಗರದ ಎಸ್.ಡಿ.ಪಿ.ಐ ಕಚೇರಿಯಲ್ಲಿ ರವಿವಾರ ಜರುಗಿತು.

ಈ ಕಾರ್ಯಕ್ರಮವನ್ನು ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷರಾದ ಆಸೀಫ್ ಕೋಟೆ ಬಾಗಿಲು ಹಾಗು ಕಾರ್ಯದರ್ಶಿ ನಿಸಾರ್ ಮರವೂರು ಜಂಟಿಯಾಗಿ ನೋಂದಾಯಿತ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸುವ ಮುಖಾಂತರ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಮಾಚಾರ್, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷ ಇಕ್ಬಾಲ್ ಎಮ್.ಎ, ಎಸ್.ಡಿ.ಟಿ.ಯು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಕಾರ್ಯದರ್ಶಿ ಆರೀಸ್ ನವರಂಗ್, ಎಸ್.ಡಿ.ಪಿ.ಐ ಹಳೆಯಂಗಡಿ ಕ್ಷೇತ್ರ ಅಧ್ಯಕ್ಷರಾದ ರಿಯಾಝ್, ಉಪಾಧ್ಯಕ್ಷರಾದ ಮುಮ್ತಾಜ್ ಅಲಿ, ಸಿದ್ದೀಕ್ ಬೊಳ್ಳೊರೂ, ಅಕ್ಬರ್ ಬೊಳ್ಳೊರು, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಶ್ರಫ್ ಮಾಚಾರ್ ಸಾರ್ವಜನಿಕರಿಗೆ ಪ್ರಸ್ತುತ ಅವಶ್ಯಕವಾಗಿರುವ ಈ ಕಾರ್ಯಕ್ರಮವನ್ನು ಸಂಘಟಿಸಿದ ಎಸ್.ಡಿ.ಪಿ.ಐ ಸದಸ್ಯರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಹೀದಾಯತ್ ಬೊಳ್ಳೊರು, ಆಸೀಫ್ ಬೊಳ್ಳೊರು, ಅಝ್ವಾನ್, ಸಂಶೀರ್, ಕಬೀರ್, ಮುಬಾರಕ್, ಆಸೀಫ್ ಇಂದಿರಾನಗರ, ಸರ್ಫರಾಜ್, ಯಾಸೀನ್, ಕಬೀರ್, ರಿಯಾಝ್, ಭಾಷಿತ್, ನಿಸಾರ್,  ಶಮೀಮ್ ಬೊಳ್ಳೊರ್ ಭಾಗವಹಿಸಿದ್ದರು.

ಸುಮಾರು 300ಕ್ಕಿಂತಲು ಅಧಿಕ ನಾಗರೀಕರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಮುದ್ರೀಸಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News