ಎಸ್ಸೆಸ್ಸೆಫ್ ಕಕ್ಕೆಪದವು ಶಾಖೆ ವತಿಯಿಂದ ಸ್ವಚ್ಚತಾ ಆಂದೋಲನ
ಕಕ್ಕೆಪದವು: "ಸ್ವಸ್ಥತೆಗಾಗಿ ಸ್ವಚ್ಚತೆ " ಧ್ಯೇಯ ವಾಕ್ಯದೊಂದಿಗೆ ಸ್ವಚ್ಚತಾ ಕಾರ್ಯವನ್ನು ಸ್ಥಳೀಯ ಮಸೀದಿ ಖತೀಬ್ ಅಬೂಬಕ್ಕರ್ ಸಅದಿ ದುವಾಃ ದೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸ್ವಚ್ಚತಾ ಆಂದೋಲನದ ಬಗ್ಗೆ ಮಾತಾನಾಡಿದ ಎಸ್ಸೆಸ್ಸೆಫ್ ಕಕ್ಕೆಪದವು ಶಾಖೆಯ ಅಧ್ಯಕ್ಷರಾದ ಯಾಕುಬ್ ಮಿಸ್ಬಾಹಿ ರವರು ಕೊರೋನಾ ಎಂಬ ಮಾರಕವಾದ ರೋಗವು ಜಗತ್ತಿನಾದ್ಯಂತ ಹರಡಿರುವ ಈ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಬಹಳ ಮುಖ್ಯವಾಗಿದೆ, ಸರ್ವರೂ ತಮ್ಮ ಮನೆಯ ಪರಿಸರ ಹಾಗೂ ಊರಿನ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಸ್ವಚ್ಚತಾ ಕಾರ್ಯವನ್ನು ಕಕ್ಕೆಪದವಿನ ಜುಮ್ಮಾ ಮಸೀದಿಯ ಪರಿಸರದಿಂದ ಪ್ರಾರಂಭಿಸಿದ ಬಳಿಕ ಕಕ್ಕೆಪದವು ಹೈಸ್ಕೂಲ್ ಬಸ್ ಸ್ಟ್ಯಾಂಡ್ ನಿಂದ ಕಕ್ಕೆಪದವು ಜಂಕ್ಷನ್ ವರೆಗೆ ಇರುವ ಪರಿಸರವನ್ನು ಸ್ವಚ್ಚ ಗೊಳಿಸಿ ಊರಿನ ಸರ್ವ ಧರ್ಮಗಳ ಜನರ ಮೆಚ್ಚುಗೆಗೆ ಪಾತ್ರರಾದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಖೆಯ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಕಕ್ಕೆಪದವು, ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್
ಬ್ಲಡ್ ಸೈಬೋ ಉಸ್ತುವಾರಿ ಶಿಹಾಬ್ ಕಕ್ಕೆಪದವು ಹಾಗೂ ಬದ್ರಿಯಾ ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಸಮದ್ ಕರ್ಲ, ಸೆಕ್ಟರ್ ತುರ್ತು ಸೇವಾ ತಂಡದ ಸದಸ್ಯರಾದ ಬದ್ರುದ್ದೀನ್, ಎಸ್ ವೈ ಎಸ್ ಕಕ್ಕೆಪದವು ಬ್ರಾಂಚ್ ಮಾಜಿ ಅಧ್ಯಕ್ಷರಾದ ಅಕ್ಬರ್ ಅಲಿ ಗುಡ್ಡೆಮನೆ, ಸದಸ್ಯರಾದ ಖಸೀಂ, ಹಾರೀಸ್, ಇಬ್ರಾಹಿಂ ಡ್ರೈವರ್ ಕಕ್ಕೆಪದವು, ಹಾಗೂ ಕಾರ್ಯಕಾರಣಿ ಸದಸ್ಯರು ಹಾಗೂ ಇತರರು ಸ್ವಚ್ಚತಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಕೈ ಜೋಡಿಸಿದ್ದರು.