ಕಾರ್ಕಳ ಬಿಎಂ ಅಬ್ದುಲ್ ಖಾದರ್ ಹಾಜಿ ನಿಧನ
ಕಾರ್ಕಳ : ಬಂಗ್ಲಗುಡ್ಡೆ ಬೀಡಿ ಕಾಂಟ್ರಾಕ್ಟ್ ಆಸ್ ಬಿಡಿ ಮಾಲಿಕ ಸುನ್ನಿ ನೇತಾರ ಬಂಗ್ಲಗುಡ್ಡೆ ಹಾಯ್ ತುಲ್ ಇಸ್ಲಾಂ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಹಾಜಿ ಬಿ ಎಂ ಅಬ್ದುಲ್ ಖಾದರ್ (80) ರವಿವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ತಾಜಲ್ ಉಮಲ್ ನೂರ್ ಅವರ ನಿಕಟ ಸಂಪರ್ಕ ಹೊಂದಿದ್ದ ಬಿ ಎಂ ಅಬ್ದುಲ್ ಖಾದರ್ ಅವರು ಬಂಗ್ಲಗುಡ್ಡೆ ಹಾಯ್ ತುಲ್ ಇಸ್ಲಾಂ ಅಸೋಸಿಯೇಷನ್ ನ ಸುದೀರ್ಘ ಕಾಲ ಅಧ್ಯಕ್ಷರಾಗಿದ್ದು ಬಂಗ್ಲಗುಡ್ಡೆ ಪ್ರಸಿದ್ದ ಸಲ್ವಾತ್ ಮಜ್ಲಿದ್ ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದು ಸಾರ್ ಹಿಂದ್ ಇಸ್ಲಾಂ ಅಕಾಡೆಮಿ ಮೂಲಕ ಬಡವರಿಗೆ ನಿರ್ಗತಿಕರಿಗೆ ಸಹಾಯ ಹಸ್ತ ನೀಡುವಲ್ಲಿ ಪ್ರಮುಖ ರಾಗಿದ್ದರು. ಸಲ್ಮಾನ್ ಮಸ್ಲೀದ್ ನ ಅಭಿವೃದ್ಧಿ ಪ್ರಮುಖ ಪಾತ್ರವಹಿಸಿದ್ದರು.
ನೇರ ನುಡಿ ಇವರು ಕಾರ್ಕಳ ಮುಸ್ಲಿಂ ಜಮಾಯತ್ ಸದಸ್ಯರಾಗಿದ್ದರು. ಕಾರ್ಕಳ ಮದರಸ ವಿದ್ಯಾಭ್ಯಾಸ ಅಭಿವೃದ್ಧಿ ಸಾಧನೆ ಪಡಿಸುವಲ್ಲಿ ಸಹಕರಿಸಿದ್ದಾರೆ.
ಮೃತರು ಪತ್ನಿ, 7 ಮಂದಿ ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿದನಕ್ಕೆ ಸುನ್ನಿ ನೇತಾರ ತೈಬಾ ಗಾಡ್೯ನ್ ನ ಅಧ್ಯಕ್ಷ ಅಲ್ ಹಾಜ್ ಅಬ್ದಲ್ ರಹಮಾನ್ ಶಾಜಾದ್ ತಿಂಜಾಳ್ , ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಷರೀಫ್ ,ಕೋಶಾಧಿಕಾರಿ ಐಸಮ್ ಶಾಕೀರ್ ಹಾಜಿ ಮಂಗಳೂರು, ಕರ್ನಾಟಕ ಮುಸ್ಲಿಂ ಜಮಾಯತ್ ರಾಜ್ಯ ಉಪಾಧ್ಯಕ್ಷ ಅಬ್ಯೂ ಸುಪ್ಯಾನ್,ಇಬ್ರಾಹಿಂ ಮದನಿ, ತೈಜಾ ಗಾಡ್೯ನ್ ಪ್ರಾಶುಂಪಾಲ ಅಹಮದ್ ಶರೀಪ್ ಅಜಾದಿ, ನಾಸೀರ್ ಶೇಖ್ , ಕೆ ಎಂಈಎಸ್ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಕೆ ಎಂ ಇಮಿಯ್ತಾಜ್, ಅಹ್ಮದ್, ಕಾರ್ಕಳ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಹ್ಮದ್ ಜಮಾಯ್ಯತುಲ್ ಫಲಾಹ್ ಕಾರ್ಕಳ ಕಾರ್ಯದರ್ಶಿ ಸಯ್ಯದ್ ಹಸನ್ , ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕ ಕಾರ್ಯಧ್ಯಕ್ಷ ಮಹಮ್ಮದ್ ಗೌಸ್ , ಮಾಜಿ ಅದ್ಯಕ್ಷ ಅಬ್ದುಲ್ ರಶೀದ್, ಮೊಹಮ್ಮದ್ ಶರೀಫ್, ಸಂತಾಪ ವ್ಯಕ್ತಪಡಿಸಿದ್ದಾರೆ