×
Ad

ಆರಿಕ್ಕಾಡಿ: ಎರಡು ಕಾರುಗಳ ನಡುವೆ ಅಪಘಾತ; ಹಸುಳೆ ಮೃತ್ಯು

Update: 2020-09-07 13:31 IST

ಕಾಸರಗೋಡು, ಸೆ.7: ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಎರಡು ತಿಂಗಳ ಹಸುಳೆ ಮೃತಪಟ್ಟು, ಒಂಭತ್ತು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ರವಿವಾರ ರಾತ್ರಿ ನಡೆದಿದೆ.

ಪಚ್ಚಂಬಳ ಕಲ್ಪಾರೆಯ ಮೂಸಾ - ಅಫ್ಸಾ ದಂಪತಿ ಯ ಮಗು ಮೃತಪಟ್ಟಿದೆ. ತೀವ್ರ ಗಾಯಗೊಂಡಿರುವ ಆರು ಮಂದಿಯನ್ನು ಮಂಗಳೂರು ಹಾಗೂ ಮೂರು ಮಂದಿಯನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಉಪ್ಪಳ ಕಡೆಯಿಂದ ಬರುತ್ತಿದ್ದ ಕಾರು ಮತ್ತು  ಬಂದ್ಯೋಡ್ ನತ್ತ ತೆರಳುತ್ತಿದ್ದ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News