ಬ್ರಿಟನ್ ಚೂರಿ ಇರಿತ ಪ್ರಕರಣ: ಆರೋಪಿಯ ಬಂಧನ
Update: 2020-09-07 19:39 IST
ಲಂಡನ್, ಸೆ. 7: ಬ್ರಿಟನ್‌ನ ಎರಡನೇ ಅತಿ ದೊಡ್ಡ ನಗರ ಬರ್ಮಿಂಗ್‌ಗಹ್ಯಾಮ್‌ನಲ್ಲಿ ನಡೆದ ಸರಣಿ ಚೂರಿ ಇರಿತಕ್ಕೆ ಸಂಬಂಧಿಸಿ ಪೊಲೀಸರು 27 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಸರಣಿ ಚೂರಿ ಇರಿತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯರಾತ್ರಿಯ ಬಳಿಕ ನಡೆದ ಒಂದು ಹತ್ಯೆ ಮತ್ತು ಏಳು ಹತ್ಯಾಯತ್ನ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಸೋಮವಾರ ಹೇಳಿದರು.
ಶಂಕಿತನನ್ನು ನಗರದ ಸೆಲ್ಲಿ ಓಕ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 4ರ ಸುಮಾರಿಗೆ ಬಂಧಿಸಲಾಗಿದೆ.