ಬಡ ದೇಶಗಳಿಗೆ ಕೊರೋನ ಲಸಿಕೆ ಪೂರೈಕೆ ಜವಾಬ್ದಾರಿ ವಹಿಸಿಕೊಂಡ ಯುನಿಸೆಫ್

Update: 2020-09-07 14:10 GMT

ವಿಶ್ವಸಂಸ್ಥೆ, ಸೆ. 7: ಕೊರೋನ ವೈರಸ್ ಲಸಿಕೆ ಸಿದ್ಧವಾದಾಗ, ಅದರ ಮೊದಲ ಪೂರೈಕೆಗಳು ಎಲ್ಲ ದೇಶಗಳಿಗೂ ಸಮಾನ ಪ್ರಮಾಣದಲ್ಲಿ ಹಾಗೂ ಕ್ಷಿಪ್ರವಾಗಿ ಲಭಿಸುವುದನ್ನು ಖಾತರಿಪಡಿಸುವುದಕ್ಕಾಗಿ ಅವುಗಳನ್ನು ಸಂಗ್ರಹಿಸುವ ಮತ್ತು ಪೂರೈಸುವ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ವಿಶ್ವಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಘೋಷಿಸಿದೆ.

ಯುನೈಟೆಡ್ ನೇಶನ್ಸ್ ಚಿಲ್ಡ್ರನ್ಸ್ ಫಂಡ್ (ಯುನಿಸೆಫ್) ಜಗತ್ತಿನ ಅತಿ ದೊಡ್ಡ ಏಕೈಕ ಲಸಿಕೆ ಖರೀದಿ ಸಂಸ್ಥೆಯಾಗಿದೆ. ಅದು ನಿಯಮಿತ ರೋಗನಿರೋಧಕ ಲಸಿಕೆ ಕಾರ್ಯಕ್ರಮ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸುಮಾರು 100 ದೇಶಗಳ ಪರವಾಗಿ ಪ್ರತಿ ವರ್ಷ 200 ಕೋಟಿ ಡೋಸ್‌ಗಳಿಗೂ ಅಧಿಕ ವಿವಿಧ ಮಾದರಿಯ ಲಸಿಕೆಗಳನ್ನು ಖರೀದಿಸುತ್ತದೆ.

ಹಲವಾರು ಲಸಿಕೆಗಳು ಪ್ರಾಯೋಗಿಕ ಹಂತಗಳಲ್ಲಿದ್ದು, ಯುನಿಸೆಫ್ ಸಂಸ್ಥೆಯು ದ ಪ್ಯಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಶನ್ (ಪಿಎಎಚ್‌ಒ)ನ ರಿವಾಲ್ವಿಂಗ್ ಫಂಡ್‌ನ ಸಹಯೋಗದಲ್ಲಿ 92 ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗಿ ಲಸಿಕೆಗಳನ್ನು ಸಂಗ್ರಹಿಸಿ ಪೂರೈಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News