×
Ad

ಮಲ್ಪೆ ಉಸ್ಮಾನ್ ಹಾಜಿ ನಿಧನ

Update: 2020-09-07 21:15 IST

ಉಡುಪಿ, ಸೆ.7: ಸುನ್ನೀ ಉಮರಾ ಪ್ರಮುಖ, ಉದ್ಯಮಿ ಸಭಾ ಉಸ್ಮಾನ್ ಹಾಜಿ ಮಲ್ಪೆ (80) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು

ಇವರು ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರಾಗಿ, ಮಲ್ಪೆಮದೀನಾ ಮಸೀದಿಯಲ್ಲಿ ಕಳೆದ 35 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಂತ್ಯಸಂಸ್ಕಾರದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು, ಮುಸ್ಲಿಂ ಜಮಾಅತ್ ಉಡುಪಿ ತಾಲೂಕು ಕಾರ್ಯದರ್ಶಿ ಮುಹಮ್ಮದ್ ರಫೀಕ್ ದೊಡ್ಡಣಗುಡ್ಡೆ ಪಾಲ್ಗೊಂಡಿದ್ದರು.

ಸಂತಾಪ:  ಡಿಕೆಎಸ್‌ಸಿ ಮ್ಯಾನೇಜರ್ ಯ.ಕೆ.ಮುಸ್ತಫಾ ಸಅದಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಾಜಿ ಮೊಯ್ದಿನ್ ಗುಡ್ವಿಲ್, ಕಾರ್ಯದರ್ಶಿ ಹಂಝತ್ ಹೆಜಮಾಡಿ, ಎಸ್‌ಡಿಐ ಅಧ್ಯಕ್ಷ ಸಯ್ಯದ್ ಫರೀದ್ ಉಡುಪಿ, ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ, ಎಸ್ಸೆಸ್ಸೆಫ್ ನಾಯಕರಾದ ಅಶ್ರಫ್ ಅಂಜದಿ ಪಕ್ಷಿಕೆರೆ, ಕೆ.ಎಸ್.ಎಂ.ಮನ್ಸೂರ್ ಉಡುಪಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಹ್ಯಾ ನಕ್ವಾ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News