ಮೋಂಟುಗೋಳಿ: ರಕ್ತದಾನ ಶಿಬಿರ, ಅಭಿನಂದನಾ ಕಾರ್ಯಕ್ರಮ
ಕೊಣಾಜೆ : ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಹೆಲ್ಪ್ ಡೆಸ್ಕ್ ಇದರ ಅಧೀನದ ಬ್ಲಡ್ ಸೈಬೋ ಇದರ 176ನೇ ರಕ್ತದಾನ ಶಿಬಿರವು ಮೋಂಟುಗೋಳಿ ಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷ ಮನ್ಸೂರ್ ಹಿಮಮಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಜಮಾಅತ್ ಖತೀಬರಾದ ಇಬ್ರಾಹಿಂ ಸಅದಿ ದುಆ: ನೇರೆವೇರಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಮೋಂಟುಗೋಳಿ,ದ.ಕ ವಕ್ಪ್ ಅಧಿಕಾರಿ ಅಬೂಬಕ್ಕರ್ ಮೋಂಟುಗೋಳಿ, ಗ್ರಾಮ ಪಂಚಾಯತ್ ಸದಸ್ಯ ಅಬ್ದುರ್ರಹ್ಮಾನ್ ಮರಿಕ್ಕಳ,ಕೆ.ಪಿ ಅಬೂಬಕ್ಕರ್ ಹಾಜಿ ಮೋಂಟುಗೋಳಿ ಮೊದಲಾದವರು ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಕರ್ನಾಟಕ ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಅಲ್ ಹಾಜ್ ಉಸ್ಮಾನ್ ಸಅದಿ ಪಟ್ಟೋರಿರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸುಲೈಮಾನ್ ಮೋಂಟುಗೋಳಿ, ಇಲ್ಯಾಸ್ ಪೊಟ್ಟೋಳಿಕೆ, ಝಕರಿಯಾ ಮೋಂಟುಗೋಳಿ,ಹೈದರ್ ಲತೀಫಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಸೆಕ್ಟರ್ ಪ್ರ.ಕಾರ್ಯದರ್ಶಿ ಮಹಮ್ಮದ್ ನಿಯಾಜ್ ಪಡಿಕ್ಕಲ್, ಸೆಕ್ಟರ್ ಉಪಾಧ್ಯಕ್ಷ ನಾಸೀರ್ ಮೋಂಟುಗೋಳಿ, ಶರೀಫ್ ವಿದ್ಯಾ ನಗರ, ಮಜೀದ್ ಮರಿಕ್ಕಳ , ಸೆಕ್ಟರ್ ಕಾರ್ಯದರ್ಶಿ ಯಝೀದ್ ಮರಿಕ್ಕಳ,ಕ್ಯಾ.ಕಾರ್ಯದರ್ಶಿ ಸಮದ್ ಮೊಂಟೆಪದವು, ಬ್ಲಡ್ ಸೈಭೋ ಸೆಕ್ಟರ್ ಉಸ್ತುವಾರಿ ಹನೀಫ್ ಕಲ್ಲರ್ಬೆ, ಸೆಕ್ಟರ್ ನಾಯಕರು ಹಾಗೂ ಶಾಖಾಗಳ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಸುತ್ತ ರಕ್ತದಾನ ಶಿಬಿರದಲ್ಲಿ ಒಟ್ಟು 87 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಎಸ್ಸೆಸ್ಸೆಫ್ ಸೆಕ್ಟರ್ ಕಾರ್ಯದರ್ಶಿ ನಾಝಿಮ್ ಸ್ವಾಗತಿಸಿ ದರು. ಮಹಮ್ಮದ್ ಸಿನಾನ್ ವಂದಿಸಿದರು.