×
Ad

ಮಂಗಳೂರು : ಸೆ. 9 ರಿಂದ 'ನೀಡ್-2020 ಲೀಡರ್ಸ್ ಮೀಟ್' ಕ್ಯಾಂಪ್ ಗೆ ಚಾಲನೆ

Update: 2020-09-08 13:40 IST

ಮಂಗಳೂರು :  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ "ನೀಡ್-2020 ಡಿವಿಶನ್- ಸೆಕ್ಟರ್ ಲೀಡರ್ಸ್ ಮೀಟ್" ಕಾರ್ಯಕ್ರಮವು ಜಿಲ್ಲೆಯ 11 ಡಿವಿಶನ್ ಗಳಲ್ಲಿ ಸೆ.9 ರಿಂದ 25 ರವರೆಗೆ ನಡೆಯಲಿದ್ದು, ಸುರತ್ಕಲ್ ಡಿವಿಶನ್ ನಲ್ಲಿ ನಾಳೆ ಸಂಜೆ 7 ಗಂಟೆಗೆ 'ನೀಡ್ ಮೀಟ್' ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

"ನೀಡ್ 2020" ಕ್ಯಾಂಪ್ ಗೆ ಎಸ್ಸೆಸ್ಸೆಫ್ ಕರ್ನಾಟಕ ಸುಪ್ರೀಂ ಕೌನ್ಸಿಲ್ ಚೇರ್ಮೇನ್ ಡಾ.ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಅಲ್ ಖಾಮಿಲ್ ಅಧಿಕೃತ ಚಾಲನೆಯನ್ನು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಮತ್ತು ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ ಸೇರಿದಂತೆ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ‌ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News