ವಿಶ್ವ ತಂಬಾಕು ರಹಿತ ದಿನಕ್ಕಾಗಿ ವೀಡಿಯೋ ಸ್ಪರ್ಧೆ
Update: 2020-09-08 17:50 IST
ಉಡುಪಿ, ಸೆ.8: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ದಿನದ ಅಂಗವಾಗಿ ವೀಡಿಯೋ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ವ್ಯಸನ ಮುಕ್ತ ಭಾರತದ ನಿರ್ಮಾಣಕ್ಕಾಗಿ ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಪ್ರೇರಣೆ ಮತ್ತು ಬಳಕೆಯಿಂದ ರಕ್ಷಿಸುವ ಸಂಬಂಧ 10 ನಿಮಿಷಕ್ಕೆ ಮೀರದಂತೆ ವೀಡಿಯೊ ಮಾಞಿ ಕಳುಹಿಸಿಕೊಡಬೇಕು.
ಉತ್ತಮ ವೀಡಿಯೊಗಳಿಗೆ ಪ್ರಥಮ ಹಾಗೂ ದ್ವಿತೀಯ ಆಕರ್ಷಕ ಬಹುಮಾನ ವನ್ನು ನೀಡಲಾಗುವುದು. ವೀಡಿಯೋ ಕಳುಹಿಸಲು ಸೆ.30ಕೊನೆಯ ದಿನವಾಗಿದೆ. ವೀಡಿಯೋವನ್ನು ಇ-ಮೇಲ್: -ntcpudupi17@gmail.com - ವಾಟ್ಸಾಪ್‌ಸಂಖ್ಯೆ:8884791809ಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.