ಕಾರ್ಕಳ: ಸಿಡಿಲು ಬಡಿದು ಹಾನಿ
Update: 2020-09-08 19:42 IST
ಉಡುಪಿ, ಸೆ.8: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ರವಿವಾರ ಸಂಜೆ ಸಿಡಿಲು ಬಡಿದು ಹಲವು ಮನೆಗಳಿಗೆ ಹಾಗೂ ಸೊತ್ತು ಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.
ನಿಟ್ಟೆಯ ರುಕ್ಕಯ್ಯ ಪೂಜಾರಿ ಎಂಬವರ ವಾಸದ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದೆ. ಮನೆಯ ಎರಡು ತೆಂಗಿನ ಮರಗಳಿಗೂ ಹಾನಿಯಾಗಿದ್ದು, ಮನೆಯಲ್ಲಿದ್ದ ಕೋಳಿಗಳು ಮೃತಪಟ್ಟಿವೆ. ಇದರಿಂದ 50ಸಾವಿರ ರೂ.ಗಳಿಗೂ ಅಧಿಕ ಹಾನಿಯಾ ಗಿರುವ ಅಂದಾಜು ಮಾಡಲಾಗಿದೆ.
ಅಲ್ಲದೇ ಅದೇ ಗ್ರಾಮದ ಜಗನ್ನಾಥ ಶೆಟ್ಟಿ ಎಂಬವರ ವಾಸದ ಮನೆಗೆ ಸಿಡಿಲು ಬಡಿದು ವಿದ್ಯುತ್ ವಯರಿಂಗ್ ಸಂಪೂರ್ಣ ಹಾನಿ ಗೊಳಗಾಗಿವೆ. ಅಲ್ಲದೇ ಲಲಿತಾ ಶೆಟ್ಟಿ ಅವರ ಎಡಗೈಗೆ ಸಿಡಿಲಿನಿಂದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 30,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.