ವಿಟ್ಲ ಟೋಪ್ಕೋ ಜ್ಯುವೆಲ್ಲರಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಸನ್ಮಾನ
Update: 2020-09-08 20:01 IST
ವಿಟ್ಲ : 2020ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ವಿಟ್ಲ ಪರಿಸರದ ಶಿಕ್ಷಕರಿಗೆ ವಿಟ್ಲ ಟೋಪ್ಕೋ ಜ್ಯುವೆಲ್ಲರಿ ವತಿಯಿಂದ ಮಂಗಳವಾರ ಶೋರೂಮ್ ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವೀರಕಂಭ ಮಜಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸಂಗೀತ ಶರ್ಮ ಪಿ.ಜಿ. ಹಾಗೂ ಅಳಕೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಇಸ್ಮಾಯಿಲ್ ಕೆ. ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಟೋಪ್ಕೋ ಜ್ಯುವೆಲ್ಲರಿ ಮಾಲಕ ಮಹಮ್ಮದ್ ಟಿ.ಕೆ. ಸನ್ಮಾನಿಸಿದರು. ರಶೀದ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.