ಸೆ.13: ‘ಮೇಲ್ತೆನೆ’ಯ ಬಹುಮಾನ ವಿತರಣೆ ಕಾರ್ಯಕ್ರಮ
Update: 2020-09-10 18:10 IST
ಮಂಗಳೂರು, ಸೆ.10: ಬ್ಯಾರಿ ಲೇಖಕರು-ಕಲಾವಿದರ ಕೂಟ (ಮೇಲ್ತೆನೆ)ವು 5ನೆ ವರ್ಷದ ಪ್ರಯುಕ್ತ ಏರ್ಪಡಿಸಲಾದ ಬ್ಯಾರಿ ಕಥೆ, ಕವನ, ಚುಟುಕು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಬ್ಯಾರಿ ಸಾಹಿತ್ಯ ಕೂಟ ಕಾರ್ಯಕ್ರಮವು ಸೆ.13ರಂದು ಬೆಳಗ್ಗೆ 10ಕ್ಕೆ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯ ಸಮೀಪದ ಶಾಂತಿಭಾಗ್‌ನ ದಾರುಲ್ ಉಲೂಮ್ ಮದ್ರಸ ಹಾಲ್‌ನಲ್ಲಿ ನಡೆಯಲಿದೆ.
ಮೇಲ್ತೆನೆಯ ಅಧ್ಯಕ್ಷ ಇಸ್ಮಾಯೀಲ್ ಟಿ. ಅಧ್ಯಕ್ಷತೆ ವಹಿಸಲಿದ್ದು, ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದಾರುಸ್ಸಲಾಂ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಪರಪ್ಪು, ಕಾರ್ಯದರ್ಶಿ ಮುಹಮ್ಮದ್ ಕಮಾಲ್, ಮದನಿ ಬೆಸ್ಟ್ ಫ್ರೆಂಡ್ಸ್ ಗ್ರೂಪ್ ಮಂಜೇಶ್ವರ ಇದರ ಮುಖಂಡರಾದ ಮುಹಮ್ಮದ್ ಸಾದಿಕ್, ಅಬ್ದುಲ್ ರಶೀದ್ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ತಿಳಿಸಿದ್ದಾರೆ.