×
Ad

ಕುಂಜಾರುಗಿರಿ: 13ಕ್ಕೆ ಸಮಗ್ರ ಕೃಷಿ ಮಾಹಿತಿ

Update: 2020-09-10 18:19 IST

ಉಡುಪಿ, ಸೆ.10: ಜಿಲ್ಲಾ ಕೃಷಿಕ ಸಂಘ ಕಾಪು ವಲಯ ಸಮಿತಿ ಆಯೋಜಿಸಿರುವ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ಸೆ.13ರ ರವಿವಾರ ಸಂಜೆ 5 ಗಂಟೆಗೆ ಕುಂಜಾರುಗಿರಿ ಪಾಜಕ ಶ್ರೀಪರಶುರಾಮ ದೇವಸ್ಥಾನದ ಅರ್ಚಕ ವಿನಯ ಭಟ್ ಇವರ ತೋಟದಲ್ಲಿ ನಡೆಯಲಿದೆ.

ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ಕಾಪು ವಲಯ ಸಮಿತಿಯ ವೇಣುಗೋಪಾಲ ಎಂ. ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ. ಆಗಮಿಸುವ ಎಲ್ಲರೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ರೂಪಿಸಿರುವ ನಿಯಮಾವಳಿಗಳನ್ನು ತಪ್ಪದೇ ಪಾಲಿಸುವಂತೆ ವಿನಂತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News