ಸುದರ್ಶನ್ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಕೇಂದ್ರದಿಂದ ಗ್ರೀನ್ ಸಿಗ್ನಲ್

Update: 2020-09-10 14:57 GMT

ಹೊಸದಿಲ್ಲಿ, ಸೆ. 10: ‘ಸರಕಾರಿ ಸೇವೆಗಳಲ್ಲಿ ಮುಸ್ಲಿಮರ ಒಳನುಸುಳುವಿಕೆ ಒಳಸಂಚಿನ ಬಹಿರಂಗ’ ಎಂಬ ವಿವಾದಾತ್ಮಕ ಕಾರ್ಯಕ್ರಮದ ಪ್ರಸಾರಕ್ಕೆ ಸುದರ್ಶನ ಸುದ್ದಿ ಚಾನೆಲ್‌ಗೆ ಕೇಂದ್ರ ಸರಕಾರ ಗುರುವಾರ ಅವಕಾಶ ನೀಡಿದೆ. ಯಾವುದೇ ಕಾರ್ಯಕ್ರಮ ಸಂಹಿತೆಯನ್ನು ಈ ಪ್ರದರ್ಶನ ಉಲ್ಲಂಘಿಸುವುದಿಲ್ಲ ಎಂಬ ಖಾತರಿ ನೀಡುವಂತೆ ಚಾನೆಲ್‌ಗೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನಿರ್ದೇಶಿಸಿದೆ. ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.

1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ ಅಡಿಯ ಕಾರ್ಯಕ್ರಮ ಸಂಹಿತೆಯನ್ನು ಕಾರ್ಯಕ್ರಮದ ಟ್ರೈಲರ್ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದ ಬಳಿಕ ಪ್ರಸಾರದ ಮೇಲೆ ನೀಡಿದ್ದ ನಿಷೇಧ ತೆರವುಗೊಳಿಸಲು ಆಗಸ್ಟ್ 29ರಂದು ದಿಲ್ಲಿ ಉಚ್ಚ ನ್ಯಾಯಾಲಯ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News