ನವಾಝ್ ಶರೀಫ್ ತಲೆತಪ್ಪಿಸಿಕೊಂಡ ಅಪರಾಧಿ ಎಂದು ಘೋಷಿಸಿದ ಪಾಕ್ ನ್ಯಾಯಾಲಯ

Update: 2020-09-10 14:58 GMT

ಇಸ್ಲಾಮಾಬಾದ್, ಸೆ. 10: ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಬುಧವಾರ ತೊಶಖಾನ ಲಂಚ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ಮತ್ತು ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಯ ವಿರುದ್ಧ ದೋಷಾರೋಪ ಹೊರಿಸಿದೆ ಹಾಗೂ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ‘ತಲೆತಪ್ಪಿಸಿಕೊಂಡವರು’ ಎಂಬುದಾಗಿ ಘೋಷಿಸಿದೆ.

ತೊಶಖಾನ ಲಂಚ ಪ್ರಕರಣವು, ವಿದೇಶಗಳು ಉಡುಗೊರೆ ನೀಡಿರುವ ವಾಹನಗಳನ್ನು ಖರೀದಿಸಲು ಝರ್ದಾರಿ ಮತ್ತು ಶರೀಫ್‌ಗೆ ಸಾಧ್ಯವಾಗುವಂತೆ ನಿಯಮಗಳನ್ನು ಗಿಲಾನಿ ಸಡಿಲಿಸಿರುವುದಕ್ಕೆ ಸಂಬಂಧಿಸಿದೆ. ಈ ಹಗರಣದಿಂದಾಗಿ ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿದೆ.

  ನವಾಝ್ ಶರೀಫ್ ಈಗ ಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶ ಅಸ್ಘರ್ ಅಲಿ, ಶರೀಫ್‌ರ ಚರ ಮತ್ತು ಸ್ಥಿರ ಸೊತ್ತುಗಳ ವಿವರಗಳನ್ನು ಕೋರಿದರು. ಪ್ರಕರಣದ ಎಲ್ಲ ಆರೋಪಿಗಳನ್ನು ಏಳು ದಿನಗಳೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News