×
Ad

ದಿನೇಶ್ ಶೆಟ್ಟಿಗಾರ್‌ಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Update: 2020-09-10 20:35 IST

ಉಡುಪಿ, ಸೆ.10: ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ದಿನೇಶ್ ಶೆಟ್ಟಿಗಾರ್ ಅವರಿಗೆ ಈ ಬಾರಿಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.

ಕಳೆದ 32ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, 1996ರಿಂದ ಹೆಬ್ರಿ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಈ ಶಾಲೆಯ ಮಕ್ಕಳು 1998ರಿಂದ 2019ರವರೆಗೆ ನಿರಂತರವಾಗಿ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

2020ರಲ್ಲಿ ತನ್ನ ಶಾಲೆಯಲ್ಲಿ ಗಣಿತ ಪ್ರಯೋಗಾಲಯವನ್ನು ಸ್ಥಾಪಿಸಿರುವ ಇವರು, ತನ್ನ ಸ್ವಂತ ಖರ್ಚಿನಿಂದ ತಯಾರಿಸಿದ ಗಣಿತದ ಕೆಲವು ಮಾದರಿಗಳು, ಮಕ್ಕಳು ಸಿದ್ಧಪಡಿಸಿದ ಮಾದರಿಗಳು ಮತ್ತು ಸರಕಾರ ನೀಡಿದ ಮಾದರಿಗಳನ್ನು ಇಲ್ಲಿ ಇರಿಸಿದ್ದಾರೆ. ಪರ್ಕಳದ ನಿವಾಸಿ ಯಾಗಿರುವ ಇವರು, ವಿಜ್ಞಾನ ಪರಿಷ್ ಉಡುಪಿ ಜಿಲ್ಲಾ ಸಂಯೋಜಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News