×
Ad

ಮಟ್ಕಾ: ಇಬ್ಬರ ಬಂಧನ

Update: 2020-09-10 20:41 IST

ಕುಂದಾಪುರ, ಸೆ.10: ಕೋಟೇಶ್ವರ ಮೀನು ಮಾರ್ಕೆಟ್ ಬಳಿ ಸೆ.9ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಬೀಜಾಡಿ ಕಮ್ತಿಯಾರ್‌ಬೆಟ್ಟುವಿನ ಶಿವರಾಮ ಕುಲಾಲ್(51) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಂದೂರು: ಶಿರೂರು ಗ್ರಾಮದ ಕೆಳಪೇಟೆ ಅಟೋರಿಕ್ಷಾ ನಿಲ್ದಾಣದ ಬಳಿ ಸೆ.10ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಶಿರೂರು ತೂದಳ್ಳಿ ಕ್ರಾಸ್ ನಿವಾಸಿ ಶ್ರೀಧರ ಪೂಜಾರಿ(49) ಎಂಬಾತನನ್ನು ಬೈಂದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News