ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2020-09-10 16:27 GMT

ಮಣಿಪಾಲ, ಸೆ.10: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಇಂದು ಸಂಜೆ ಮಣಿಪಾಲ ಮೀಪದ ಶಿಂಬ್ರಾ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಧಾರವಾಡದ ಫಾರೂಕ್ ಶೇಖ್ (35) ಹಾಗೂ ಅಬ್ದುಲ್ ರಝಾಕ್ (40) ಎಂದು ಗುರುತಿಸಲಾಗಿದೆ. ಇವರಿಂದ 2 ಕೆ.ಜಿ. ತೂಕದ ಗಾಂಜಾ ಮತ್ತು ಮಾರುತಿ 800 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಣಿಪಾಲ ಠಾಣಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ದಯಕರ ಪ್ರಸಾದ್, ಅಬ್ದುಲ್ ರಝಾಕ್, ಥೋಮ್‌ಸನ್, ಸಲ್ಮಾನ್ ಖಾನ್, ಆದರ್ಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News