×
Ad

ಕ್ಯಾಲಿಫೋರ್ನಿಯ ಕಾಡ್ಗಿಚ್ಚು: 3 ಸಾವು

Update: 2020-09-10 22:15 IST
ಸಾಂದರ್ಭಿಕ ಚಿತ್ರ

ಲಾಸ್ ಏಂಜಲಿಸ್ (ಅವೆುರಿಕ), ಸೆ. 10: ಕ್ಯಾಲಿಫೋರ್ನಿಯದ ರಾಜಧಾನಿ ಸ್ಯಾಕ್ರಮೆಂಟೊ ಉತ್ತರ ಭಾಗದಲ್ಲಿ ಉರಿಯುತ್ತಿರುವ ಬೃಹತ್ ಕಾಡ್ಗಿಚ್ಚಿಗೆ ಮೂವರು ಬಲಿಯಾಗಿದ್ದಾರೆ ಹಾಗೂ ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ಅಪಾಯದಲ್ಲಿವೆ ಎಂದು ಬಟ್ ಕೌಂಟಿಯ ಶೆರಿಫ್ ಬುಧವಾರ ತಿಳಿಸಿದ್ದಾರೆ.

ಈ ಮೂವರ ಶವಗಳು ಎರಡು ಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ಶೆರಿಫ್ ಕೋರಿ ಹೋನಿಯ ಹೇಳಿದರು. ಇದರೊಂದಿಗೆ, ಈ ವರ್ಷ ಕ್ಯಾಲಿಫೋರ್ನಿಯದಲ್ಲಿ ಸಂಭವಿಸಿದ ಕಾಡ್ಗಿಚ್ಚುಗಳಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 11ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News