ಸೆ.12ರಂದು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ಸೆ.10: ನಗರದ ನೆಹರೂ ಮೈದಾನ ಉಪಕೇಂದ್ರ ಸಹಿತ ವಿವಿಧ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.12ರಂದು ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಸೆ.12ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆ.ವಿ. ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಸೌತ್‌ವಾರ್ಫ್, 11 ಕೆ.ವಿ. ಪಾಂಡೇಶ್ವರ, 11ಕೆ.ವಿ. ವಿವೇಕ ಮೋಟಾರ್ ಹಾಗೂ 11 ಕೆ.ವಿ. ಅನ್ಸಾರಿ ಫೀಡರ್‌ಗಳಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಇದರಿಂದ ನಗರದ ಜಿಲ್ಲಾಧಿಕಾರಿ ಕಚೇರಿ, ಪೋರ್ಟ್‌ರೋಡ್ ದಕ್ಕೆ, ನಿರೇಶ್ವಲ್ಯ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಎ.ಬಿ. ಶೆಟ್ಟಿ ಸರ್ಕಲ್, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮೀ ಟೆಂಪಲ್ ರಸ್ತೆ, ಫೋರಂ ಮಾಲ್, ಮಹಾಲಿಂಗೇಶ್ವರ ಟೆಂಪಲ್ ರಸ್ತೆ, ವಿವೇಕ ಮೋಟಾರ್ಸ್, ಜುಲೇಖ ಟ್ರಸ್ಟ್, ವಾಸ್‌ಲೇನ್, ಮೈದಾನ 3ನೇ ಕ್ರಾಸ್, ಹೋಟೆಲ್ ಹರಿಕಿರಣ್, ಸರ್ವಿಸ್ ಬಸ್‌ಸ್ಟಾಂಡ್, ಮೈದಾನ 4ನೇ ಕ್ರಾಸ್, ನೆಲ್ಲಿಕಾಯಿ ರೋಡ್, ಸ್ಟೇಟ್‌ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕಾವೂರು/ಬೈಕಂಪಾಡಿ: ಸೆ.12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಪಿಟಿಸಿಎಲ್‌ನಿಂದ 110 ಕೆ.ವಿ. ಕಾವೂರು-ಬೈಕಂಪಾಡಿ ವಿದ್ಯುತ್ ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದೆ.
ಇದರಿಂದ ಹೊನ್ನೆಕಟ್ಟೆ, ವಿದ್ಯಾನಗರ, ಕುಳಾಯಿಗುಡ್ಡೆ, ತೋಕೂರು, ಕುಳಾಯಿ, ವಿದ್ಯಾನಗರ, ಕಾನ, ಜನತಾ ಕಾಲನಿ, ಕಟ್ಲ, ಚೊಕ್ಕಬೆಟ್ಟು, ಪರಮೇಶ್ವರಿ ನಗರ, ಸುರತ್ಕಲ್, ತಡಂಬೈಲ್, ಸುಭಾಷಿತನಗರ, ಮುಕ್ಕ, ಉದಯನಗರ, ಸಸಿಹಿತ್ಲು, ಕಾಟಿಪಳ್ಳ, ಕೃಷ್ಣಾಪುರ, ಮುಂಚೂರು, ಮದ್ಯ, ಕೈಕಂಬ, ಕುತ್ತೆತ್ತೂರು, ಪೆರ್ಮುದೆ, ಸೂರಿಂಜೆ, ಹಳೆಯಂಗಡಿ, ಎಂಆರ್‌ಪಿಎಲ್ ಕಾಲನಿ ಚೇಳಾರು, ಪಂಜ, ಶಿಮಂತೂರು, ಕವತ್ತಾರು, ಇಂಡಸ್ಟ್ರಿಯಲ್ ಏರಿಯ ಬೈಕಂಪಾಡಿ, ರುಚಿಸೋಯ, ಅದಾನಿ, ಕೋಸ್ಟಲ್ ಚಿಪ್‌ಬೋರ್ಡ್, ಬ್ರೈಟ್ ಪ್ಯಾಕೇಜಿಂಗ್, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.