ರಶ್ಯ ಹಸ್ತಕ್ಷೇಪ ತನಿಖೆ ನಿಲ್ಲಿಸುವಂತೆ ಶ್ವೇತಭವನದಿಂದ ಆದೇಶ: ಗುಪ್ತಚರ ಅಧಿಕಾರಿ

Update: 2020-09-10 17:38 GMT

ವಾಶಿಂಗ್ಟನ್, ಸೆ. 10: 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸುವಂತೆ ಹಾಗೂ ಬದಲಿಗೆ ಚೀನಾ ಮತ್ತು ಇರಾನ್‌ಗಳು ನಡೆಸಿರುವ ಹಸ್ತಕ್ಷೇಪದ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನವು ನನಗೆ ಆದೇಶ ನೀಡಿತ್ತು ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮರು ಆಯ್ಕೆ ಪ್ರಯತ್ನಗಳಿಗೆ ಸಹಾಯವಾಗುವಂತೆ ಗುಪ್ತಚರ ಸಂಸ್ಥೆಯಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂಬ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಆರೋಪಗಳಿಗೆ ಪೂರಕವಾಗಿ ಆಂತರಿಕ ಭದ್ರತಾ ಇಲಾಖೆಯ ವಿಶ್ಲೇಷಕ ಬ್ರಯಾನ್ ಮರ್ಫಿ ಈ ಸ್ಫೋಟಕ ಮಾಹಿತಿಗಳನ್ನು ಒದಗಿಸಿದ್ದಾರೆ.

ರಶ್ಯದ ಹಸ್ತಕ್ಷೇಪ ಆರೋಪಗಳಿಗೆ ಸಂಬಂಧಿಸಿದ ತನಿಖೆಯು ಟ್ರಂಪ್‌ರನ್ನು ‘ಕೆಟ್ಟದಾಗಿ ಬಿಂಬಿಸುತ್ತದೆ’ ಎಂಬುದಾಗಿ ಆಂತರಿಕ ಭದ್ರತಾ ಇಲಾಖೆಯ ಉಸ್ತುವಾರಿ ಮುಖ್ಯಸ್ಥ ಚಾಡ್ ವುಲ್ಫ್ ನನ್ನಲ್ಲಿ ಹೇಳಿದ್ದಾರೆ ಎಂದು ಮರ್ಫಿ ತಿಳಿಸಿದ್ದಾರೆ. ನನ್ನ ವಿಶ್ಲೇಷಣಾತ್ಮಕ ವರದಿಗಳನ್ನು ತಡೆಹಿಡಿಯುವ ಆದೇಶವು ಟ್ರಂಪ್ ಆಪ್ತ ಹಾಗೂ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯನ್‌ರಿಂದಲೇ ಬಂದಿದೆ ಎಂಬುದಾಗಿ ವುಲ್ಫ್ ನನ್ನಲ್ಲಿ ಹೇಳಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ಮರ್ಫಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News