ಕುಂಟಿಕಾನ: ವಸತಿ ಸಮುಚ್ಚಯದ ತಡೆಗೋಡೆ ಕುಸಿತ
Update: 2020-09-11 13:30 IST
ಮಂಗಳೂರು, ಸೆ.11: ನಗರದಲ್ಲಿ ಮಳೆ ಮುಂದುವರಿದಿರುವಂತೆಯೇ ನಗರದ ಕುಂಟಿಕಾನದ ವಸತಿ ಸಮುಚ್ಚಯವೊಂದರ ತಡೆಗೋಡೆ ಕುಸಿದ ಘಟನೆ ನಡೆದಿದೆ. ಸುಮಾರು 10ಕ್ಕೂ ಅಧಿಕ ಕಾರುಗಳು ಮಣ್ಣಿನಡಿ ಸಿಲುಕಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ತಹಶೀಲ್ದಾರ್ ಗುರುಪ್ರಸಾದ್, ಮಾಜಿ ಮೇಯರ್ ಶಶಿಧರ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.