×
Ad

ಸಿಪಿಎಂ ಕಾರ್ಯಕರ್ತ ಮುರಳಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಪ್ಪಿತಸ್ಥ

Update: 2020-09-11 15:31 IST

ಕಾಸರಗೋಡು, ಸೆ.11: ಸಿಪಿಎಂ ಕಾರ್ಯಕರ್ತ ಕುಂಬಳೆ ಶಾಂತಿಪಳ್ಳದ ಮುರಳಿ(35) ಕೊಲೆ ಪ್ರಕರಣದ ಪ್ರಮುಖ ಆರೋಪಿ ತಪ್ಪಿತಸ್ಥನೆಂದು ಕಾಸರಗೋಡು ಜಿಲ್ಲಾ  ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದ್ದು, ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿ ಶರತ್ ರಾಜ್ ತಪ್ಪಿತಸ್ಥ ಎಂದು ತೀರ್ಪಿತ್ತಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಇಂದು(ಸೆ.11) ಸಂಜೆ ಘೋಷಿಸಲಿದೆ.
2017ರ  ಅಕ್ಟೋಬರ್  17ರಂದು  ಕೃತ್ಯ ನಡೆದಿತ್ತು. ಸೀತಾಂಗೋಳಿ ಸಮೀಪ ತಂಡವೊಂದು ಕಡಿದು ಮುರಳಿಯನ್ನು ಕೊಲೆಗೈದಿತ್ತು. 

ಪ್ರಕರಣದಲ್ಲಿ ಶರತ್ ರಾಜ್ ಅಲ್ಲದೆ ದಿನೇಶ್, ವರದರಾಜ್, ಮಿಥುನ್ ಕುಮಾರ್, ನಿತಿನ್ ರಾಜ್, ಕಿರಣ್ ಕುಮಾರ್, ಮಹೇಶ್ ಮತ್ತು ಅಜಿತ್ ಕುಮಾರ್ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News