ಪಿಯುಸಿ ಪೂರಕ ಪರೀಕ್ಷೆ: ಇಬ್ಬರು ಗೈರು
Update: 2020-09-11 18:12 IST
ಉಡುಪಿ, ಸೆ.11: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಇಂದು ಉಡುಪಿ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಗಣಕ ವಿಜ್ಞಾನ ವಿಷಯದ ಪರೀಕ್ಷೆ ನಡೆದಿದ್ದು, ಹೆಸರು ನೊಂದಾಯಿಸಿಕೊಂಡ 42 ಮಂದಿಯಲ್ಲಿ 40 ಮಂದಿ ಪರೀಕ್ಷೆ ಬರೆದು ಇಬ್ಬರು ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ.
ಶನಿವಾರ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿವೆ.