ಸೆ.13ರಂದು ಗುರು-ಶನಿ ಗ್ರಹಗಳ ಮಧ್ಯೆ ಐಎಸ್‌ಎಸ್ ಪ್ರಯಾಣ
ಉಡುಪಿ, ಸೆ.11: ಗುರು ಮತ್ತು ಶನಿ ಗ್ರಹಗಳ ಮಧ್ಯದಿಂದ ಮೂರು ಮಂದಿ ಗಗನಯಾತ್ರಿಗಳು ಸೆ.13ರಂದು ಸಂಜೆ ವೇಳೆ ಹಾದು ಹೋಗಲಿದ್ದಾರೆ.
ದಕ್ಷಿಣ ಕ್ಷಿತಿಜದಿಂದ ಉತ್ತರದ ದಿಕ್ಕಿನಲ್ಲಿ ನೋಡುತ್ತ ಬಂದರೆ, ಪ್ರಕಾಶಮಾನ ವಾಗಿ ಕಾಣುವ ಚುಕ್ಕಿಯೇ ಗುರು ಗ್ರಹ. ಇದರ ಪಶ್ಚಿಮ ದಿಕ್ಕಿನಲ್ಲಿ ಶನಿ ಗ್ರಹವನ್ನು ಗುರುತಿಸಬಹುದು. ಸೆ.13ರ ಸಂಜೆ ಈ ಗುರು ಗ್ರಹದ ಹೊಳಪನ್ನು ಪ್ರತಿಸ್ಪರ್ಧಿ ಸುವ ಚುಕ್ಕಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್(ಐಎಸ್‌ಎಸ್). ಹಲವು ದೇಶಗಳು ಒಟ್ಟುಗೂಡಿ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
410ಕಿ.ಮೀ. ಎತ್ತರದಲ್ಲಿ ಹಾರುವ ಈ ಉಪಗ್ರಹದಲ್ಲಿ ಹಲವು ಪ್ರಯೋಗ ಗಳು ಮತ್ತು ಸಂಶೋಧನೆಗಳನ್ನು ನಡೆಯುತ್ತಿರುತ್ತದೆ. ಕೆಲವು ತಿಂಗಳಿನಿಂದ ರಷ್ಯಾ ದೇಶದ ಏನಾಟೊಲಿ ಇವ್ಯಾನಿಶಿನ್ ಮತ್ತು ಇವಾನ್ ವ್ಯಾಗನರ್ ಹಾಗೂ ಅಮೆರಿಕಾದ ಕ್ರಿಸ್ ಕ್ಯಾಸಿಡಿ, ಈ ಉಪಗ್ರಹದಲ್ಲಿ ವಾಸಿಸುತಿದ್ದು, ಇವರನ್ನು ಹೊತ್ತ ಐಎಸ್‌ಎಸ್ ಸೆ.13ರಂದು 7:30ರ ಹೊತ್ತಿಗೆ ನೈರುತ್ಯ ದಿಕ್ಕಿನ ಕ್ಷಿತಿಜದಿಂದ ಉದಯವಾಗಿ ವಾಯುವ್ಯ ದಿಕ್ಕಿನಲ್ಲಿ ಹಾದು ಹೋಗುವುದು ಗೋಚರಿಸುತ್ತದೆ.
ಐಎಸ್‌ಎಸ್‌ನ ಈ ಪ್ರಯಾಣದಿಂದ ಉಡುಪಿಯ ನಿವಾಸಿಗಳಿಗೆ 3 ಗಗನ ಯಾತ್ರಿಗಳು, ಈ 2 ದೈತ್ಯ ಗ್ರಹಗಳ ನಡುವೆ ಹಾದು ಹೋಗುವಂತೆ ಕಾಣುತ್ತದೆ. ಸೆ.13ರಂದು ಸಂಜೆ 7:30ರಿಂದ 7:33ರವರೆಗೆ ಐಎಸ್‌ಎಸ್ ಉಪಗ್ರಹ ಆಕಾಶ ದಲ್ಲಿ ಅತೀ ಪ್ರಕಾಶಮಾನವಾಗಿ ಹೊಳೆಯುತ್ತದೆಎ. 520ಕಿ.ಮೀ. ಎತ್ತರದಲ್ಲಿ ಈ ಎರಡು ಗ್ರಹಗಳ ಮಧ್ಯದಲ್ಲಿ ಹಾದು ಹೋಗುವ ಹಾಗೆ ನಮಗೆ ಕಾಣುವ ಐಎಸ್‌ಎಸ್‌ನ ದೃಶ್ಯವನ್ನು ಹವ್ಯಾಸಿ ಖಗೋಳ ವೀಕ್ಷಕರು ಹಾಗೂ ಖಗೋಳ- ಛಾಯಾಗ್ರಾಹಕರು ಸಂಭ್ರಮಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.