×
Ad

ಸೆ.13ರಂದು 'ಲಯನ್ಸ್ ಜಿಲ್ಲೆ 317ಸಿ' ಪದಗ್ರಹಣ

Update: 2020-09-11 20:31 IST

ಉಡುಪಿ, ಸೆ.11: ಲಯನ್ಸ್ ಜಿಲ್ಲೆ 317ಸಿ ಜಿಲ್ಲಾ ಪದಗ್ರಹಣ ಸಮಾರಂಭ ಸೆ.13ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಉಡುಪಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಲಯನ್ಸ್ ಗವರ್ನರ್ ನೀಲಕಂಠ ಎಂ.ಹೆಗಡೆ ಬೆಳ್ಮಣ್ಣು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಆನ್‌ಲೈನ್‌ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳ್ಮಣ್ಣು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವೇದಮೂರ್ತಿ ವಿಘ್ನೇಶ್ ಭಟ್ ಆಶೀರ್ವಚನ ನೀಡಲಿರುವರು. ಲಯನ್ಸ್ ನಾಯಕರಾದ ಮಹೇಶ ಚಟ್ನಿಸ್(ಅಮೆರಿಕಾ), ನಾಗರಾಜ ಬಾಯರಿ, ವಂಶಿಧರ ಬಾಬು ಭಾಗವಹಿಸಲಿರುವರು ಎಂದರು.

ಕೊರೋನ ಹಿನ್ನೆಲೆಯಲ್ಲಿ ಲಯನ್ಸ್ ಜಿಲ್ಲೆ 317ಸಿ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲು ಸಾಧ್ಯವಾಗದೆ ಇರುವುದರಿಂದ ಈ ಕಾರ್ಯ ಕ್ರಮವನ್ನು ಆನ್‌ಲೈನ್ ಮೂಲಕ(ವರ್ಚುಯಲ್) ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಪರ್ಕಳ, ಮಾಜಿ ಜಿಲ್ಲಾ ಗವರ್ನರ್ ಡಿ.ಶ್ರೀಧರ ಶೆಣವ, ಜಿಲ್ಲಾ ಸಂಪರ್ಕ ಅಧಿಕಾರಿ ಪ್ರಕಾಶ್ಚಂದ್ರ, ವಕ್ತಾರ ಕಿರಣ್ ರಂಗಯ್ಯ, ಕಾರ್ಯನಿರ್ವಾಹಕ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News