ಮಂಜನಾಡಿ: ಭಾರೀ ಮಳೆಗೆ ಕುಸಿದ ಮನೆಗಳು

Update: 2020-09-11 17:10 GMT

ಕೊಣಾಜೆ : ಭಾರೀ ಮಳೆಗೆ ಮಂಜನಾಡಿ ಗ್ರಾಮದ ನೆಕ್ಕರೆ ಹಾಗೂ ಅಸೈ ಎಂಬಲ್ಲಿ ಮನೆಗಳು ಕುಸಿದು ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.

ಮಂಜನಾಡಿಯ ನೆಕ್ಕರೆಯ ಮೊಯ್ದಿನ್ ಕುಂಞಿ ಅವರ‌ ಮನೆಯು ಮಳೆಗೆ ಸಂಪೂರ್ಣವಾಗಿ  ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆ‌ ಮಂದಿ ಹೊರಗೆ ಹೋಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಅಲ್ಲದೆ ಮಂಜನಾಡಿ ಗ್ರಾಮದ ಅಸೈ ಎಂಬಲ್ಲಿ ಪ್ರವೀಣ್ ಎಂಬವರ ಮನೆಯೂ ಮಳೆಯಿಂದಾಗಿ‌ ಭಾಗಶಃ ಕುಸಿದು ಬಿದ್ದಿದೆ. ಘಟನಾ  ಸ್ಥಳಕ್ಕೆ ಮಂಜನಾಡಿ ಗ್ರಾಮಕರಣಿಕರಾದ ಪ್ರಸಾದ್ ಅವರು ಭೇಟಿ‌‌ ನೀಡಿ‌ ಪರಿಶೀಲನೆ‌ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News