ಚೀನಾದಿಂದ ಐವರು ಭಾರತೀಯರ ಹಸ್ತಾಂತರ: ಸೇನೆ
Update: 2020-09-12 11:17 IST
ಹೊಸದಿಲ್ಲಿ, ಸೆ.12: ಈ ತಿಂಗಳಾರಂಭದಲ್ಲಿ ಚೀನಾದೊಂದಿಗಿನ ಗಡಿ ಸಮೀಪದ ಹಳ್ಳಿಯಿಂದ ಕಾಣೆಯಾಗಿದ್ದ ಐವರು ಭಾರತೀಯರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಥವಾ ಪಿಎಲ್‌ಎ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ಇಂದು ಬೆಳಗ್ಗೆ ತಿಳಿಸಿವೆ.
ಚೀನಾದ ಪ್ರದೇಶದಲ್ಲಿ ಹಸ್ತಾಂತರ ನಡೆದಿದ್ದು, ತಂಡಕ್ಕೆ ಭಾರತೀಯ ಪ್ರದೇಶವನ್ನು ತಲುಪಿ, ಕಿಬಿಥು ಬಾರ್ಡರ್ ಪೋಸ್ಟ್ ಮೂಲಕ ಅರುಣಾಚಲ ಪ್ರದೇಶವನ್ನು ಪ್ರವೇಶಿಸಲು ಒಂದು ಗಂಟೆ ಅವಧಿಬೇಕಾಗುತ್ತದೆ.
ಅರುಣಾಚಲ ಪ್ರದೇಶದ ಯುವಕರನ್ನು ಹಸ್ತಾಂತರಿಸಲಾಗಿದೆ ಎಂುದು ಚೀನಾದ ಪಿಎಲ್‌ಎ ಭಾರತೀಯ ಸೇನೆಗೆ ದೃಢಪಡಿಸಿದೆ. ಸೆಪ್ಟಂಬರ್ 12ರಂದು ಯಾವುದೆ ಸಮಯದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಹಸ್ತಾಂತರ ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಟ್ವೀಟ್ ಮಾಡಿದ್ದರು.
ಬೇಟೆಗಾಗಿ ತೆರಳಿದ್ದ ಐವರು ಯುವಕರು ಸೆಪ್ಟಂಬರ್ 1ರಂದು ಕಾಣೆಯಾಗಿದ್ದರು ಎಂದು ಸೇನೆಯು ಪ್ರಕಟನೆಯೊಂದರಲ್ಲಿ ತಿಳಿಸಿತ್ತು.