×
Ad

ಫ್ಲವರ್ಸ್ ಆಫ್ ಪ್ಯಾರಡೈಸ್ ಸ್ಕೂಲ್: 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Update: 2020-09-12 16:56 IST

ಉಡುಪಿ, ಸೆ.12: ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್‌ನಲ್ಲಿ 2019-20ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಮಾರ್ಚ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಲಾಕ್ ಡೌನ್ ಕಾರಣಕ್ಕೆ ಮುಂದೂಡಲಾಗಿತ್ತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲಾ ಶೈಕ್ಷಣಿಕ ನಿರ್ದೇಶಕ ಯಾಸೀನ್ ಮಲ್ಪೆ, ಇಲ್ಲಿಯ ತನಕ ನೀವು ಹಾದಿ ತಪ್ಪದಂತೆ ನಿಯಂತ್ರಿಸುವ ಜವಾಬ್ದಾರಿ ನಿಮ್ಮ ತಂದೆತಾಯಿ ಮತ್ತು ನಿಮ್ಮ ಶಿಕ್ಷಕರದ್ದಾಗಿತ್ತು. ಕಾಲೇಜು ಬದುಕಿನಲ್ಲಿ ಇವರಾರೂ ಇರುವುದಿಲ್ಲ, ನೀವು ಹಾದಿ ತಪ್ಪದಂತೆ ನಿಮ್ಮನ್ನು ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ, ಅನ್ಯತಾ ನಿಮ್ಮ ಸುಂದರ ಭವಿಷ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.

ಜೀವನದಲ್ಲಿ ಸಣ್ಣಪುಟ್ಟ ಸಾಧನೆಗಳಿಗೆ ಸಂತೃಪ್ತರಾಗದಿರಿ, ಮಹತ್ಸಾಧನೆಗಳನ್ನು ಮಾಡುವ ಕನಸು ಕಾಣಿ, ಕೇವಲ ನಿಮಗಾಗಿ ಬದುಕುವ ಸಣ್ಣ ಮನುಷ್ಯರಾಗದೆ, ಸಮಾಜಕ್ಕಾಗಿ, ಜನರ ಕಲ್ಯಾಣಕ್ಕಾಗಿ ಬದುಕುವ ದೊಡ್ಡ ಮನುಷ್ಯರಾಗಿ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾರೋಪ ಭಾಷಣ ಮಾಡಿದ ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ನಿಮಗೂ, ಶಾಲೆಗೂ ಮತ್ತು ನಿಮ್ಮ ಮಾತಾಪಿತರಿಗೂ ಹೆಸರು ತರುವಂತಹ ಸಾಧನೆ ಮಾಡಿ ಎಂದು ಶುಭಹಾರೈಸಿದರು.

ವಿದ್ಯಾರ್ಥಿಗಳ ತರಗತಿ ಶಿಕ್ಷಕಿ ಪೂರ್ಣಿಮಾ ಮತ್ತು ಅರೇಬಿಕ್ ಶಿಕ್ಷಣ ಮುಖ್ಯಸ್ಥ ಮೌಲಾನಾ ಇಮ್ರಾನುಲ್ಲಾ ಖಾನ್ ಸಂದರ್ಭೋಚಿತವಾಗಿ ಮಾತನಾಡಿದರು.
   ವಿದ್ಯಾರ್ಥಿಗಳಾದ ಝೈನಬ್ ಝಾಫರ್, ಪೂಜಿತಾ ಹಾಗೂ ಅನೀಸ್ ತಮ್ಮ ಶಾಲಾ ಜೀವನದ ಸುಂದರ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಮನೋರಂಜನೆಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿ ಸಾಮ್ಯಾ ಹಾಗೂ ರಕ್ಷಿತಾ ಆಟೋಟ ಸ್ಪರ್ಧೆಗಳನ್ನು ನಿರ್ವಹಿಸಿದರು. ಶಿಕ್ಷಕಿ ಶಬಾನಾ ಕಾರ್ಯಕ್ರಮದ ಸಂಯೋಜನೆ ಮಾಡಿದರು.

 9ನೇ ತರಗತಿ ವಿದ್ಯಾರ್ಥಿ ಅಫ್ಫಾನ್ ಮಿರ್ಝಾ ವಿದಾಯ ಗೀತೆ ಹಾಡಿದರು. ಓದಿಸಿದ ಶಿಕ್ಷಕರಿಂದಲೇ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ಕೊಡಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಎಫ್.ಎಂ. ಅಬ್ದುಲ್ ರಝಾಕ್, ಕಾರ್ಯದರ್ಶಿ ಖತೀಬ್ ಅಲ್ತಾಫ್ ಮತ್ತು ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಸಾದಿಕ್ ಉಪಸ್ಥಿತರಿದ್ದರು. ಶಿಕ್ಷಕ ರಾಜೇಶ್ ಸ್ವಾಗತಿಸಿದರು. ಶಿಕ್ಷಕಿ ಸುಮನಾ ವಂದಿಸಿದರು. ಜಾಫರ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News