ಪಿಯುಸಿ ಪೂರಕ ಪರೀಕ್ಷೆ: 66 ಮಂದಿ ಗೈರು
Update: 2020-09-12 17:41 IST
ಉಡುಪಿ, ಸೆ.12: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಇಂದು ಉಡುಪಿ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಒಟ್ಟು 66 ಮಂದಿ ಗೈರುಹಾಜರಾ ಗಿದ್ದಾರೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ತಿಳಿಸಿದ್ದಾರೆ.
ಅರ್ಥಶಾಸ್ತ್ರ ಪರೀಕ್ಷೆಗೆ 432 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 381 ಮಂದಿ ಪರೀಕ್ಷೆಗೆ ಹಾಜರಾಗಿ 51 ಮಂದಿ ಗೈರಾದರೆ, ಭೌತಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 205 ಮಂದಿಯಲ್ಲಿ 189 ಮಂದಿ ಪರೀಕ್ಷೆ ಬರೆದು 16 ಮಂದಿ ಗೈರುಹಾಜರಾಗಿದ್ದರು ಎಂದವರು ಹೇಳಿದರು.
ಸೆ.14 ಸೋಮವಾರದಂದು ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ ಹಾಗೂ ಶಿಕ್ಷಣ ವಿಷಯಗಳ ಪರೀಕ್ಷೆ ನಡೆಯಲಿದೆ.