×
Ad

ಉಡುಪಿ: ಎಸೆಸೆಲ್ಸಿ ಪೂರಕ ಪರೀಕ್ಷೆ ಬರೆಯುವ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಸೂಚನೆ

Update: 2020-09-12 17:44 IST

ಉಡುಪಿ, ಸೆ.12: ಇದೇ ತಿಂಗಳು ನಡೆಯುವ 2020ನೇ ಸಾಲಿನ ಎಸೆಸೆಲ್ಸಿ ಪೂರಕ ಪರೀಕ್ಷೆಯನ್ನು ಬರೆಯಲು ಇಚ್ಛಿಸುವ, ಕೋವಿಡ್ ಪಾಸಿಟಿವ್ ಬಂದು ಮನೆಯಲ್ಲೇ ಐಸೋಲೇಷನ್‌ನಲ್ಲಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅಪೇಕ್ಷಿಸಿದಲ್ಲಿ, ಚಿಕಿತ್ಸೆ ನೀಡುತ್ತಿರುವ ವೈದ್ಯರ ಅನುಮತಿ ಪತ್ರ ಸಲ್ಲಿಸಿದರೆ. ಅಂತಹ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು.

ಅಂತಹ ವಿದ್ಯಾರ್ಥಿಗಳು ಅವರವರ ಶಾಲಾ ವ್ಯಾಪ್ತಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೆಳಕಂಡ ಸಹಾಯವಾಣಿಯ ಮೂಲಕ ನೋಡಲ್ ಅಧಿಕಾರಿ, ಕಚೇರಿಯನ್ನು ಸಂಪರ್ಕಿಸಿ ಸೆ.17ರೊಳಗೆ ನೊಂದಣಿ ಮಾಡಿಕೊಳ್ಳಬೇಕಾಗಿದೆ. ಇವರಿಗೆ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ ಒಂದು ಕೋವಿಡ್ ಕೇರ್ ಸೆಂಟರ್‌ನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕು ಸಹಾಯವಾಣಿ: ಉಡುಪಿ:0820-2521570, 9880687316 ಬ್ರಹ್ಮಾವರ: 0820-2560800, 9980933513, ಕಾರ್ಕಳ: 08258- 298571, 9480661334, ಕುಂದಾಪುರ: 08254-230618, 8277616435, ಬೈಂದೂರು: 08254-252066, 9449269539.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News