ಸೆ. 14ಕ್ಕೆ ಕಾಪು ಕಲ್ಯದಲ್ಲಿ ರೈತರಿಗೆ ಮಾಹಿತಿ
Update: 2020-09-12 17:47 IST
ಉಡುಪಿ, ಸೆ.12: ಜಿಲ್ಲಾ ಕೃಷಿಕ ಸಂಘ ಕಾಪು ವಲಯ ಸಮಿತಿ ವತಿಯಿಂದ ತೆಂಗು ಮತ್ತು ಅಡಿಕೆ ಕೃಷಿ ಮಾಹಿತಿ ಕಾರ್ಯಕ್ರಮ ಸೆ.14ರಂದು ಸಂಜೆ 5 ಗಂಟೆಗೆ ಕಾಪು ಕಲ್ಯ ನಿವೃತ್ತ ಶಿಕ್ಷಕ ಉದಯ ಶೆಟ್ಟಿ ಇವರ ತೋಟದಲ್ಲಿ ನಡೆಯಲಿದೆ.
ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ಕಾಪು ವಲಯ ಸಮಿತಿಯ ವೇಣುಗೋಪಾಲ ಎಂ. ಭಾಗವಹಿಸಲಿದ್ದಾರೆ. ರೈತರಿಗೆ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸಬಹುದು ಎಂದು ಕೃಷಿಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.