ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ವತಿಯಿಂದ ಇನ್‌ಸ್ಪಿರೇಶನ್ 2020 ಕಾರ್ಯಾಗಾರ

Update: 2020-09-12 12:56 GMT

ಕುಂಬ್ರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಕುಂಬ್ರ ಸೆಕ್ಟರ್ ವತಿಯಿಂದ ಸೆಕ್ಟರ್ ವ್ಯಾಪ್ತಿಯ 11 ಶಾಖೆಗಳ ನಾಯಕರಿಗಾಗಿ ಇನ್‌ಸ್ಪಿರೇಶನ್ 2k20 ಕಾರ್ಯಾಗಾರವನ್ನು ಅಮ್ಚಿನಡ್ಕ ಬದಿಯಡ್ಕ ಮಸೀದಿ ವಠಾರದಲ್ಲಿ ನಡೆಸಲಾಯಿತು.

ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಅಧ್ಯಕ್ಷ ಶಮೀರ್ ಸಖಾಫಿ ರೆಂಜಲಾಡಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಝನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ ಉದ್ಘಾಟಿಸಿದರು. ಎಸ್ ವೈಎಸ್ ರಾಜ್ಯ ನಾಯಕ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ತರಗತಿ ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕವನ್ನು ಪಡೆದ ಅಮ್ಚಿನಡ್ಕ ಶಾಖೆಯ ನಾಲ್ವರು ವಿದ್ಯಾರ್ಥಿಗಳನ್ನು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಲಕಟ್ಟೆ, ಬದಿಯಡ್ಕ ಮಸ್ಜಿದ್ ಅಧ್ಯಕ್ಷ ಹಸೈನಾರ್, ಪಿ.ಎ. ಇಂಜಿನಿಯರಿಂಗ್ ಕಾಲೇಜು ಪ್ರೊಪೆಸರ್ ಅಬ್ದುಲ್ ಕಾದರ್, ಅಮ್ಚಿನಡ್ಕ ಬ್ರಾಂಚ್ ಎಸ್ ವೈಎಸ್ ನಾಯಕರಾದ ಮೂಸ ಬದಿಯಡ್ಕ, ಎಸ್ಸೆಸ್ಸೆಫ್ ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ, ಡಿವಿಝನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಡಿವಿಷನ್ ಬ್ಲಡ್ ಉಸ್ತುವಾರಿ ಹಾರಿಸ್ ಅಡ್ಕ
ಹಾಗೂ ಸೆಕ್ಟರ್ ವ್ಯಾಪ್ತಿಯ 11 ಶಾಖೆಗಳ 100ಕ್ಕಿಂತಲೂ ಮಿಕ್ಕ ನಾಯಕರು ಉಪಸ್ಥಿತರಿದ್ದರು.

ಹಾಫಿಝ್ ರಂಶೀದ್ ಸಖಾಫಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಮ್ಚಿನಡ್ಕ ಶಾಖೆಯ ಅಧ್ಯಕ್ಷ ಹನೀಫ್ ಮಿಸ್ಬಾಹಿ ಸ್ವಾಗತಿಸಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕಟ್ಟತ್ತಾರು ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News