×
Ad

ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ರಚನೆಗೆ ಅರ್ಜಿ ಆಹ್ವಾನ

Update: 2020-09-12 19:47 IST

ಉಡುಪಿ, ಸೆ.12: ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ರಚನೆಗೆ ಆಯಾ ಗ್ರಾಮಗಳಲ್ಲಿರುವ ನೋಂದಾಯಿತ ರೈತರ ಸಹಕಾರಿ ಸೊಸೈಟಿ, ನೋಂದಾಯಿತ ರೈತರ ಸೊಸೈಟಿ, ರೈತರ ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆಯಾದ ಸಂಸ್ಥೆಗಳು ಸ್ಥಳೀಯವಾಗಿ ಅವಶ್ಯವಿರುವ ಯಂತ್ರೋಪಕರಣ ಗಳಿಗೆ ಅನುಗುಣವಾಗಿ ಗರಿಷ್ಟ 10 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳ ಒಂದು ಪ್ರಾಯೋಜನೆಯನ್ನು ಸಲ್ಲಿಸಬಹುದಾಗಿದೆ. ಇಲಾಖೆಯಿಂದ ಶೇ.80ರ ಸಹಾಯಧನದಲ್ಲಿ ಗರಿಷ್ಟ 8 ಲಕ್ಷ ರೂ.ವೆಗೆ ಸಹಾಯಧನ ನೀಡಲಾಗುವುದು.

ಉಡುಪಿ ತಾಲೂಕಿಗೆ ಒಂದು ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ರಚನೆಗೆ ಅವಕಾಶವಿದೆ. ಕಡಿಮೆ ಯಾಂತ್ರೀಕೃತ ಶಕ್ತಿ ಲಭ್ಯತೆ ಇರುವ ಗ್ರಾಮಗಳಿಗೆ ಆದ್ಯತೆ ನೀಡಿ ಸಂಸ್ಥೆಯನ್ನು ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾ ಗುವುದು. ಆಸಕ್ತ ನೋಂದಾಯಿತ ಸಂಸ್ಥೆಗಳು ಅರ್ಜಿಯನ್ನು ಸೆ.22ರೊಳಗೆ ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಳುಹಿಸಬೇಕು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸು ವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News