ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಪೌಡರ್ ವಿತರಣೆ
Update: 2020-09-12 19:49 IST
ಉಡುಪಿ, ಸೆ.12: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದ ನಿಕ್ಷಯ ಪೋಷಣೆ ಪೌಷ್ಠಿಕ ಆಹಾರ ಸಪ್ತಾಹದ ಅಂಗವಾಗಿ ಕ್ಷಯ ರೋಗಿಗಳಿಗೆ ಲಯನ್ಸ್ ಪ್ರಕೃತಿ ಉಡುಪಿ ಇವರ ವತಿಯಿಂದ ನ್ಯೂಟ್ರಿಷನ್ ಪೌಡರ್‌ನ್ನು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರಿಸಿದರು.
ಬಳಿಕ ಜಿಲ್ಲೆಯ ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಪೌಡರ್‌ನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡ, ಡಿಟಿಓ ಚಿದಾನಂದ ಸಂಜು ಎಸ್, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿ ಅಶೋಕ್ ಕುಮಾರ್, ಉಪ್ಯಾಧ್ಯಕ್ಷ ಸಾಧು ಶೆಟ್ಟಿ, ಹೆಚ್ ಬಾಲಕೃಷ್ಣ ಶೆಟ್ಟಿ, ಶೇಖರ ಶೆಟ್ಟಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಲಯನ್ಸ್ ಆಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಸುರೇಶ ಕೆ. ಸಾಲಿಗಾ್ರಮ ಕಾರ್ಯಕ್ರಮ ಸಂಯೋಜಿಸಿದರು.