ದೇಶದಲ್ಲಿ 46 ಲಕ್ಷ ದಾಟಿದ ಕೋವಿಡ್ ಪ್ರಕರಣಗಳು

Update: 2020-09-12 14:22 GMT

ಹೊಸದಿಲ್ಲಿ,ಸೆ.12: ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 97,570 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಹೊಸ ದಾಖಲೆ ಸೃಷ್ಟಿಯಾಗಿದ್ದು,ಇದರೊಂದಿಗೆ ಈವರೆಗಿನ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 46,59,984ಕ್ಕೇರಿದೆ.

ಈ ಅವಧಿಯಲ್ಲಿ 1,201 ಜನರು ಸಾವನ್ನಪ್ಪಿದ್ದು,ಇದರೊಂದಿಗೆ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆ 77,472ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

 ಕಳೆದ 24 ಗಂಟೆಗಳಲ್ಲಿ 81,533 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಚೇತರಿಸಿಕೊಂಡಿರುವವರ ಸಂಖ್ಯೆ 36 ಲಕ್ಷವನ್ನು ದಾಟಿದ್ದು,ದೇಶದಲ್ಲಿ ಈಗ ಸುಮಾರು 9.58 ಲ.ಪ್ರಕರಣಗಳು ಸಕ್ರಿಯವಾಗುಳಿದಿವೆ. ಇದು ಒಟ್ಟೂ ದಾಖಲಾದ ಪ್ರಕರಣಗಳ ಶೇ.20.56ರಷ್ಟಿದೆ.

ಶನಿವಾರ ಬೆಳಿಗ್ಗೆ ಭಾರತದ ಚೇತರಿಕೆ ದರ ಶೇ.77.77ರಷ್ಟಿದ್ದು,ಸಾವಿನ ದರವು ಶೇ.1.6ರಷ್ಟಿತ್ತು.

ಭಾರತವು ಈಗ ವಿಶ್ವದಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 64 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News