ಮಂಗಳೂರು: ಡೆತ್‌ನೋಟ್ ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ
ಮಂಗಳೂರು, ಸೆ.12: ವಿವಾಹಿತ ಯುವತಿಯೋರ್ವಳು ಡೆತ್‌ನೋಟ್ ಬರೆದಿಟ್ಟು, ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗುರುಪುರದ ಭಜನಾ ಮಂದಿರ ಸಮೀಪದ ನಿವಾಸಿ, ವಿವಾಹಿತೆ ಶಿಲ್ಪಾ (28) ಆತ್ಮಹತ್ಯೆಗೈದವರು.
ಈಕೆ ಬಜ್ಪೆ ಪೇಟೆಯ ಜ್ಯುವೆಲ್ಲರಿ ಅಂಗಡಿಯೊಂದರ ಮಾಲಕರೊಬ್ಬರ ಪುತ್ರಿ. ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಊರಿಗೆ ಬಂದಿದ್ದ ಈಕೆ ‘ಮನೆಯಿಂದಲೇ ಕೆಲಸ’ ನಿರ್ವಹಿಸುತ್ತಿದ್ದರು. ಈಕೆಯ ಪತಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆಗೆ 11 ತಿಂಗಳ ಮಗುವೊಂದಿದೆ ಎಂದು ತಿಳಿದುಬಂದಿದೆ.
ಸಾಯುವ ಮುನ್ನ ಈಕೆಯು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಡೆತ್‌ನೋಟ್‌ನಲ್ಲಿನ ಮಾಹಿತಿಯು ಅಸ್ಪಷ್ಟತೆಯಿಂದ ಕೂಡಿದೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಂತ್ಯ ಸಂಸ್ಕಾರ ಜರುಗಿದೆ.