ಮುತ್ತೂರು: ಎರಡು ರಸ್ತೆ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ
Update: 2020-09-12 21:15 IST
ಮಂಗಳೂರು, ಸೆ.12: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ಅಗರಿ ಮತ್ತು ಬಳ್ಳಾಜೆಯಲ್ಲಿ ತಲಾ 14 ಲಕ್ಷ ರೂ. ವೆಚ್ಚದ ಎರಡು ರಸ್ತೆ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರ ಜೊತೆಯಲ್ಲಿ ಜಿಪಂ ಸದಸ್ಯ ಜನಾರ್ದನ ಗೌಡ ಮುಚ್ಚೂರು, ಗ್ರಾಪಂ ಮಾಜಿ ಸದಸ್ಯರಾದ ಪುಷ್ಪಾ ನಾಯ್ಕಾ, ವಸಂತಿ, ಪ್ರವೀಣ್ ಆಳ್ವ ಗುಂಡ, ಉತ್ತರ ಮಂಡಲ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಸತೀಶ್ ಬಳ್ಳಾಜೆ, ಪ್ರಧಾನ ಕಾರ್ಯದರ್ಶಿ ಆನಂದ ದೇವಾಡಿಗ, ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅರುಣಾ ಶೆಟ್ಟಿ ಬಾರ್ದಿಲ, ಮುಖಂಡರಾದ ಹೊನ್ನಯ್ಯ ಅಟ್ಟೆಪದವು, ಶೇಖರ್ ನೆಲಚ್ಚಿಲ್, ಪ್ರಸಾದ್ ಎಂ., ಅಶೋಕ್ ಸಪಳಿಗ, ರಮೇಶ್, ವಿಜಯಕುಮಾರ್ ಶೆಟ್ಟಿ, ಮಹಾಬಲ ಸಾಲ್ಯಾನ್, ಚಂದ್ರಹಾಸ ಅಗರಿ, ಪ್ರಸಾದ್ ಜೈನ್ ಅಗರಿ, ಸಂತೋಷ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.