ಉಡುಪಿ: ನೀಟ್ ಪರೀಕ್ಷೆಗೆ 1003 ವಿದ್ಯಾರ್ಥಿಗಳು ಗೈರು

Update: 2020-09-13 14:40 GMT

ಉಡುಪಿ, ಸೆ.18: ಉಡುಪಿ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ರವಿವಾರ ನಡೆದ ನೀಟ್ ಪರೀಕ್ಷೆಗೆ 1003(ಶೇ.35) ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ ನೀಟ್ ಪರೀಕ್ಷೆಗೆ ಒಟ್ಟು 2861 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1858(ಶೇ.65) ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕೇಂದ್ರದಲ್ಲಿ 309, ಶಿರ್ವ ಡೋನ್ ಬೊಸ್ಕೋ ಸ್ಕೂಲ್ ಕೇಂದ್ರದಲ್ಲಿ 280, ಉಡುಪಿ ಪಿಪಿಸಿ ಕೇಂದ್ರ 249, ಮಣಿಪಾಲ ಮಾಧವ ಕೃಪಾ ಸ್ಕೂಲ್ ಕೇಂದ್ರದಲ್ಲಿ 242, ನಿಟ್ಟೆ ಡಾ.ಎನ್‌ಎಸ್‌ಎಎಂ ಸ್ಕೂಲ್ ಕೇಂದ್ರದಲ್ಲಿ 243, ಬ್ರಹ್ಮಾವರ ಎಸ್‌ಎಂಎಸ್ ಸ್ಕೂಲ್ ಕೇಂದ್ರ 238, ಉಡುಪಿ ವಿದ್ಯೋದಯ ಸ್ಕೂಲ್ ಕೇಂದ್ರದಲ್ಲಿ 240, ಬ್ರಹ್ಮಾವರ ಲಿಟ್ಲ್ ರಾಕ್ ಕೇಂದ್ರದಲ್ಲಿ 57 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News