ಗಂಗೊಳ್ಳಿ: ಮೀನುಗಾರಿಕೆ ಸ್ವಉದ್ಯೋಗ ತರಬೇತಿ ಸಮಾರೋಪ

Update: 2020-09-13 14:42 GMT

ಗಂಗೊಳ್ಳಿ, ಸೆ.13: ಗಂಗೊಳ್ಳಿ ಗ್ರಾಮ ವಿಕಾಸ ಸಮಿತಿ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಆಶ್ರಯದಲ್ಲಿ ಮೀನುಗಾರಿಕೆ ಸ್ವಉದ್ಯೋಗ ತರಬೇತಿಯ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ರವಿವಾರ ಜರಗಿತು.

ಮುಖ್ಯ ಅತಿಥಿಯಾಗಿದ್ದ ಗ್ರಾಮ ವಿಕಾಸ ಸಮಿತಿ ಜಿಲ್ಲಾ ಪ್ರಮುಖ್ ಪ್ರಮೋದ್ ಶೆಟ್ಟಿ ಮಾತನಾಡಿ, ಆತ್ಮನಿರ್ಭರ್ ಭಾರತ್ ಆಶಯದಂತೆ ಕೊರೊನಾದಿಂದಾಗಿ ಬೇರೆ ಬೇರೆ ಊರುಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಬಂದ ಉದ್ಯೋಗ ಆಕಾಂಕ್ಷಿಗಳಿಗಾಗಿ ಮತುತಿ ಆಸಕತಿರಿಗೆ ಸ್ವಉದ್ಯೋಗದಲ್ಲಿ ತರಬೇತಿ ನೀಡಿ, ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಒಳನಾಡು ಹಾಗೂ ಕರಾವಳಿ ಮೀನುಗಾರಿಕೆ ಮತುತಿ ಮತ್ಸ್ಯೋದ್ಯಮದಲ್ಲಿ ಅವಕಾಶಗಳ ಬಗ್ಗೆ ಅಧಿಕಾರಿಗಳು ಮತುತಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ ಎಂದರು.

ಗಂಗೊಳ್ಳಿ ದಾಕುಹಿತ್ಲು ಶ್ರೀರಾಮ ಮಂದಿರ ಅಧ್ಯಕ್ಷ ಜಗನ್ನಾಥ ಪಟೇಲ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ತಾಲೂಕು ಸೇವಾ ಪ್ರಮುಖ್ ಶ್ರೀಧರ ಗಂಗೊಳ್ಳಿ ಉಪಸ್ಥಿತರಿದ್ದರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸುಮಾರು 45 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮ ಸಂಘಟನಾ ಪ್ರಮುಖ್ ರಾಜೇಶ ಕಾವೇರಿ ಕುಂದಾಪುರ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News