×
Ad

ಬೆಳ್ತಂಗಡಿ: ಎಸ್ ಡಿ ಪಿ ಐ ಸುನ್ನತ್ ಕೆರೆ ಘಟಕದ ವತಿಯಿಂದ ರಕ್ತದಾನ ಶಿಬಿರ

Update: 2020-09-13 20:49 IST

ಬೆಳ್ತಂಗಡಿ,ಸೆ.13: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುನ್ನತ್ ಕೆರೆ ಘಟಕ ಇದರ ವತಿಯಿಂದ  ರಕ್ತದಾನ ಶಿಬಿರ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಾಕೂಬ್ ಕೊಯ್ಯುರು ಅವರಿಗೆ ಸನ್ಮಾನ ಕಾರ್ಯಕ್ರಮ ಇಂದು ಸುನ್ನತ್ ಕೆರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ಹೈದರ್ ನಿರ್ಸಾಲ್ ರವರು ವಹಿಸಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಅಧ್ಯಕ್ಷರಾದ ಮುಸ್ತಫಾ ಜಿ.ಕೆ., ಎಸ್ ಡಿ ಪಿ ಐ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿಯಾದ ಅಲ್ಫೊಂಸ್ ಫ್ರಾಂಕೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು 90 ಮಂದಿ ರಕ್ತದಾನ ಮಾಡಿ ಸಹಕರಿಸಿದರು.

ಈ ಸಂದರ್ಭ ಎಸ್ ಡಿ ಪಿ ಐ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ರಾದ ದಾವುದ್ ಜಿ.ಕೆ., ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ಅಶ್ರಫ್ ಅಲಿಕುಂಞಿ ಅಧ್ಯಕ್ಷರು ಪತ್ರಕರ್ತರ ಸಂಘ ಬೆಳ್ತಂಗಡಿ, ಯಾಕೂಬ್ ಕೊಯ್ಯುರ್ ಅಧ್ಯಾಪಕರು ನಡ ಶಾಲೆ, ಅಲ್ ಮಸ್ಜಿದುಲ್ ಹುದಾ ಜುಮ್ಮಾ ಮಸ್ಜಿದ್ ಸುನ್ನತ್ ಕೆರೆ ಇದರ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹ್ಮಾನ್, ನಿವೃತ ಕ.ರ.ರಾ.ಸಾ.ನಿ. ಉದ್ಯೋಗಿ ಎಮ್.ಡಿ.ಸ್ವಾದಿಕ್ ಸಾಹೇಬ್ ಸುನ್ನತ್ ಕೆರೆ, ಡಾ. ಝೈನುದ್ದೀನ್, ನಾರಾಯನ್ ಕುಲಾಲ್ ಗ್ರಾಮ ಕರಣಿಕರು ಕುವೆಟ್ಟು ಗ್ರಾಮ ಸಮಿತಿ ಹಾಗೂ ಇನ್ನಿತರ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಎಸ್ ಡಿ ಪಿ ಐ ಪಾಡ್ಯಾರು ಘಟಕದ ಅಧ್ಯಕ್ಷ ಕಲಂದರ್ ಅಂಗಡಿ ಸ್ವಾಗತಿಸಿದರು. ನಿಸಾರ್ ಸುನ್ನತ್ ಕೆರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News